ಶಿಕ್ಷಣಸುದ್ದಿ

ಆ್ಯಪ್ ನಲ್ಲಿ ಲೋನ್ ಪಡೆದರೆ ನೇಣೇ ಗತಿ!ಹೇಗೆ ಕಾಡ್ತಾರೆ ಗೊತ್ತಾ ಕಾಸಿನ ಖದೀಮರು?

Loan On The Apploan On The App; ಮೈ ತುಂಬಾ ಸಾಲ ಇದೆ..ಸಂಸಾರ ನಡೆಸೋದು ಕೂಡ ಕಷ್ಟ ಆಗ್ತಾ ಇದೆ.. ಸಾಲಗಾರರು ನೆತ್ತಿ ಮೇಲೆ ಕುಟ್ಟ ತೊಡಗಿದ್ದಾರೆ. ಏನ್ಮಾಡೋದು ಅಂತ ಕುಳಿತಿರುವಾಗಲೇ ಮೊಬೈಲಿಗೆ ಬಂತಲ್ಲ ಒಂದು ಮೆಸೇಜು.. ನಿಮಗೆ ಇನ್ಸ್ಟ್ಂಟ್ ಲೋನ್ ಬೇಕಾ..ಜಸ್ಟ್ ಐದು ನಿಮಿಷದಲ್ಲಿ ಕೆವೈಸಿ ಮುಗಿಸಿ ಕಾಸು ತಗೋಳಿ.. ಅಲಲೇಲೇ…ಇಷ್ಟು ನೋಡಿದ್ದೇ ನಿಮಗೆ ಭಾಗ್ಯಲಕ್ಷ್ಮಿ ಆವಾಹನೆ ಆಗಿಬಿಡ್ತಾಳೆ, ಆಧಾರ್, ಪ್ಯಾನ್ ಹಾಕಿದ್ದೇ ಸಿಬಿಲ್ ಸ್ಕೋರ್ ಇದ್ರೆ, ಅತ್ತ ಹತ್ತೇ ನಿಮಿಷಕ್ಕೆ ನಿಮ್ಮ ಖಾತೆಯಲ್ಲಿ ಹಣ ಜಮೆಯಾಗುತ್ತೆ.. ನೀವು ಕಾಸು ಬಂದ ಖುಷಿಯಲ್ಲಿರುವಾಗಲೇ ಅತ್ತ ನಿಮಗೆ ಲೋನ್ ಕೊಟ್ಟವನು ಕೊಟ್ಟ ಸಾಲದ ಹತ್ತು ಪಟ್ಟು ಬಡ್ಡಿ ಕೀಳೋಕೆ ಲೆಕ್ಕ ಬರೀತಾ ಇರ್ತಾನೆ..

ಹೌದು..ಆ್ಯಪ್ ಲೋನ್ ಜಾಲಕ್ಕೆ ಸಿಲುಕಿ ರಾಜ್ಯದಲ್ಲಿ ವಾರಕ್ಕೊಂದು ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತಿವೆ. ನಿಮಿಗೆ ತಕ್ಷಣ ಹಣ ಬೇಕು , ಬ್ಯಾಂಕ್ನಲ್ಲಾದ್ರೆ ತಕ್ಷಣ ಹಣ ಸಿಗೋದಿಲ್ಲ ಹಾಗಾಗಿ ,ನೋ ಡಾಕ್ಯುಮೆಂಟ್! ನೋ ಪ್ರೂಫ್! ತಕ್ಷಣ ಹಣ ಅಂತ ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಬರೋ ಕಲರ್ ಕಲರ್ ಜಾಹೀರಾತು ನಿಮ್ಮನ್ನ ಇನ್ನಿಲ್ಲದೆ ಸೆಳೆಯುತ್ತೆ. ಹಣ ಪಡೆಯೋ ಧಾವಂತಕ್ಕೆ ಬಿದ್ದು ಎದ್ನೋ ಬಿದ್ನೋ ಅಂತ ಆಧಾರು ಪಾನ್ ಕಾರ್ಡ್ ಫೋಟೋ ತೆಗೆದು ಅಪರಿಚಿತ ಆ್ಯಪ್ ಒಂದರ ಏಜೆನ್ಟನ್ನೇ ಆಪತ್ಭಾಂದವ ಎಂದು ಕೊಂಡು ಅವ್ನ್ ಕೇಳೋ ಡಾಕ್ಯುಮೆಂಟನ್ನ ಮಿಂಚಿನ ವೇಗದಲ್ಲಿ ಕಳುಹಿಸಿಕೊಟ್ರಿ ಎಂದಾದ್ರೆ ನೀವು ಜಾಲಕ್ಕೆ ಸಿಕ್ಕಿ ಕೊಂಡ್ರಿ ಎಂದರ್ಥ.

ಆ್ಯಪ್ ಕೇಳೋ ಪ್ರತಿಯೊಂದು ಪ್ರಶ್ನೆಗಳಿಗೂ ಅನುಮತಿಸೋ ನೀವು ,ಸ್ಕ್ರೀನ್ ನಲ್ಲಿ ಏನು ಬರೆದಿದ್ದಾರೆ ಅನ್ನೋದನ್ನ ಅರ್ಥ ಮಾಡಿಕೊಳ್ಳದೆ ,ಹಣ ಪಡೆದುಕೊಳ್ಳೋ ಭರದಲ್ಲಿ ಪ್ರತಿಯೊಂದಕ್ಕೂ ಓಕೆ ಕ್ಲಿಕ್ಕಿಸಿ ಪ್ರಾಣ ಹಿಂಡೋ ಜಾಲಕ್ಕೆ ಬಲಿಯಾಗಿ ಬಿಡ್ತೀರಿ ,ನಿಮ್ಮ ನಿಯಂತ್ರಣದಲ್ಲಿರೋ ಕಾಂಟೆಕ್ಟ್ ಡಿಟೇಲ್ಸ್ ನಿಂದ ಹಿಡಿದು ನಿಮಗೆ ಮಾತ್ರ ಗೊತ್ತಿರೋ ನಿಮ್ಮ ಖಾಸಗಿ ವಿಡಿಯೋಗಳನ್ನ ನೋಡೋ ಅನುಮತಿಯನ್ನ ನಿಸ್ಸ೦ಕೋಚವಾಗಿ ಲೋನ್ ಕೊಡೊ ಆಪ್ ವ್ಯಕ್ತಿಗಳಿಗೆ ಕೊಟ್ಟುಬಿಡ್ತೀರ ,ಅಯ್ಯೋ ನಾನ್ಯಾವಾಗ ಕೊಟ್ಟೆ ಅಂತ ಯೋಚಿಸ್ಬೇಡಿ ,ಹಣ ಪಡೆಯೋ ೩೦ ಸೆಕೆಂಡ್ ಮುಂಚೆ ಸ್ಕ್ರೀನ್ ನಲ್ಲಿ ALLOW ALLOW ಎಂದು ಕ್ಲಿಕ್ಕಿಸಿದ್ರಲ್ಲ.. ಯಸ್ ಅದೇ ನೀವು ಬಿಟ್ಟು ಕೊಟ್ಟ ನಿಮ್ಮ ಖಾಸಗಿ ಜಗತ್ತು.

ಹಣದ ಸಮಸ್ಯೆಗಳು ಮನುಷ್ಯನಿಗೆ ಸಹಜ.. ಹಂಗಂತ ಆ ಸಮಸ್ಯೆಗೆ ಪರಿಹಾರವೇ ಇಲ್ವಾ ಖಂಡಿತ ಇದೆ. ಆದ್ರೆ ಈಗ್ಲೇ ಬೇಕು ತಕ್ಷಣವೇ ಪರಿಹಾರ ಬೇಕು ಅಂತ ಆತುರಕ್ಕೆ ಬಿದ್ದು ,ಮೊಬೈಲ್ಗಳಲ್ಲಿ ಪರಿಚಯವಾದ ವಿಚಿತ್ರ ಹೆಸರಿನ ಆಪ್ಗಳಲ್ಲಿ ಸಾಲ ಪಡೆದುಕೊಳ್ಳದಿರಿ ,ಮೊಬೈಲ್ ನಲ್ಲಿ ಕಾಣಿಸೋ ಎಷ್ಟೋ ಆಪ್ಗಳಿಗೆ ಆರ್ಬಿಐ ಅನುಮತಿಯೇ ಕೊಟ್ಟಿಲ್ಲ
ನೀವು ಯಾವಾಗಲಾದರೂ ಸಾಲ ತೆಗೆದುಕೊಳ್ಳುವಾಗ, ಆರ್‌ಬಿಐ ಅನುಮತಿ ಇರುವ ಸಂಸ್ಥೆಗಳಿಂದಲೇ ಸಾಲ ತೆಗೆದುಕೊಳ್ಳಿ.

2. ಯಾವುದೇ ಲೋನ್ ಆಪ್‌ನ ವಂಚನೆಯಲ್ಲಿ ನೀವು ಸಿಲುಕಿಕೊಂಡರೆ ತಕ್ಷಣವೇ ಪೊಲೀಸರಿಗೆ ದೂರು ನೀಡಿ. 3. ಸಮೀಪದ ಸೈಬರ್ ಕ್ರೈಮ್ ಸ್ಟೇಷನ್‌ಗೆ ಈ ಬಗ್ಗೆ ದೂರು ನೀಡಿ. 4. ಸಾಲ ವಸೂಲಿ ಮಾಡುವ ಏಜೆಂಟರುಗಳು, ಅವರು ಹಾಕುವ ಬೆದರಿಕೆಗಳು, ನಕಲಿ ಫೋಟೋ, ವೀಡಿಯೋಗಳ ಬಗ್ಗೆ ಹೆದರಿಕೆ ಬೇಡ. 5. ಕೊನೆಯದಾಗಿ… ಎಚ್ಚರಿಕೆಯಿಂದಿರಿ, ಯಾವುದೇ ಅನುಮಾನಾಸ್ಪದ ಆಪ್‌ಗೆ ನಿಮ್ಮ ಫೋನ್‌ನ ಯಾವುದೇ ಅನುಮತಿ ನೀಡಬೇಡಿ. ತಕ್ಷಣ ಫೇಕ್ ಆಪ್ ಗಳಿದ್ರೆ ಮೊಬೈಲ್ನಿಂದ ತೆಗೆದು ಹಾಕಿ ,ಇನ್ನು ಕರೆ ಮಾಡಿ ಕಿರುಕುಳ ಕೊಟ್ಟರೆ ಭಯ ಪಡದೆ ಪೊಲೀಸ್ ಮೊರೆ ಹೋಗಿ ,ಸುಂದರ ಜೀವನವನ್ನ ಆತ್ಮಹತ್ಯೆಯೊಂದಿಗೆ ಅಂತ್ಯಗೊಳಿಸಿಕೊಳ್ಳದಿರ.

Comments (0)

Your email address will not be published. Required fields are marked *

Back to top button