#Exclusive NewsTop Newsವಿಶೇಷಸುದ್ದಿ

ಟ್ರಂಪ್ ವಿರುದ್ಧ ಮತ್ತೆ ಲೈಂಗಿಕ ದೌರ್ಜನ್ಯದ ಆರೋಪ!

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ದ ಇನ್ನೊಂದು ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. ನ.5ರ ಚುನಾವಣೆಗೂ ಮುನ್ನ ಡೊನಾಲ್ಡ್ ಟ್ರಂಪ್ ಮತ್ತೊಂದು ಸಂಕಷ್ಟ ಎದುರಾಗಿದೆ.  31 ವರ್ಷದ ಹಿಂದೆ ಟ್ರಂಪ್ ತಮ್ಮನ್ನು ಅಸಭ್ಯವಾಗಿ ತಬ್ಬಿಕೊಂಡು, ಸ್ತನ,ಪೃಷ್ಠವನ್ನು ಮರ್ದಿಸಿದ್ದರು ಎಂದು 56 ವರ್ಷದ ಮಾಜಿ ರೂಪದರ್ಶಿ ಸ್ಟೇಸಿ ವಿಲಿಯಮ್ ಆರೋಪಿಸಿದ್ದಾರೆ. ಡೆಮಾಕ್ರೆಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಪರ ಪ್ರಚಾರದ ಗುಂಪು ಜೂಮ್ ಕಾಲ್‌ನಲ್ಲಿ ಮಾಧ್ಯಮಗಳ ಜೊತೆಗೆ ಏರ್ಪಡಿಸಿದ್ದ ಸಂವಾದದಲ್ಲಿ ಆರೋಪಿಸಿದ್ದಾರೆಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ.  1992ರಲ್ಲಿ ನನಗೆ ಜೆಫ್ರಿ ಎಪ್ ಸ್ಟೀನ್ (ಲೈಂಗಿಕ ದೌರ್ಜನ್ಯ ಪ್ರಕ ರಣದಲ್ಲಿ ಶಿಕ್ಷೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ) ಮೂಲಕ ಟ್ರಂಪ್ ಪರಿಚಯವಾಯಿತು. ಜೆಫ್ರಿ ಜೊತೆ ಡೇಟಿಂಗ್‌ನಲ್ಲಿದ್ದೆ. ಒಂದು ದಿನ ಜೆಫ್ರಿ ಟ್ರಂಪ್ ಕಚೇರಿಗೆ ಕರೆದುಕೊಂಡು ಹೋದರು. ಆಗ ಟ್ರಂಪ್ ನನ್ನನ್ನು ಎಳೆದು ತಬ್ಬಿಕೊಂಡು ಅಸಭ್ಯವಾಗಿ ಸ್ತನ, ಪೃಷ್ಠ ಮರ್ದಿಸಿದರು. ಆಗ ನಾನು ಶಾಕ್ ಆಗಿದ್ದೆ’ ಎಂದಿದ್ದಾರೆ. ಹಿಂದೆಯೂ ನೀಲಿಚಿತ್ರ ತಾರೆ, ಮಾಡೆಲ್, ಕೆಲ ಮಹಿಳೆಯರಿಂದ ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯದ ದೂರುಗಳು ಕೇಳಿಬಂದಿದ್ದವು.

Comments (0)

Your email address will not be published. Required fields are marked *

Back to top button