#Exclusive NewsTop Newsವಿಶೇಷಸುದ್ದಿ

ಇನ್ನು ಮುಂದೆ ಹೆದ್ದಾರಿಗಳಲ್ಲಿ ವಾಹನಗಳು ಕ್ರಮಿಸಿದ ದೂರಕ್ಕೆ ಮಾತ್ರ ಟೋಲ್ ಅನ್ವಯವಾಗಲಿದೆ.

ಕೇಂದ್ರ ಸರಕಾರ ಶುಭಸುದ್ದಿ ನೀಡಿದೆ. ಇನ್ನು ಮುಂದೆ ಹೆದ್ದಾರಿಗಳಲ್ಲಿ ವಾಹನಗಳು ಕ್ರಮಿಸಿದ ದೂರಕ್ಕೆ ಮಾತ್ರ ಟೋಲ್ ಅನ್ವಯವಾಗಲಿದೆ. ಕಡಿಮೆ ದೂರ ಚಲಿಸಿದರೂ ಮುಂದಿನ ಟೋಲ್ ಗೇಟ್ ವರೆಗಿನ ಪೂರ್ಣ ಶುಲ್ಕ ಸಲ್ಲಿಸುವ ತಾಪತ್ರಯ ತಪ್ಪಲಿದೆ. ಜತೆಗೆ ಟೋಲ್‌ಗೇಟ್‌ಗಳಲ್ಲಿ ವಾಹನ ದಟ್ಟಣೆ ಕಿರಿಕಿರಿಯೂ ಕಡಿಮೆಯಾಲಿದೆ.ದೇಶಾದ್ಯಂತ ಹೆದ್ದಾರಿಗಳಲ್ಲಿ ಉಪಗ್ರಹ ನಕ್ಷೆ ಆಧರಿತ (ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ-ಜಿಎನ್‌ಎಸ್‌ಎಸ್) ಟೋಲ್ ಸಂಗ್ರಹಕ್ಕೆ ಅನುಮತಿ ನೀಡಿ ಕೇಂದ್ರ ಹೆದ್ದಾರಿ ಸಚಿವಾಲಯ ಮಂಗಳವಾರ ಅಧಿಸೂಚನೆ ಹೊರಡಿಸಿದೆ. ಆರಂಭಿಕವಾಗಿ ಬೆಂಗಳೂರು-ಮೈಸೂರು (ಎನ್ಎಎಚ್-275) ಹಾಗೂ ಪಂಜಾಬ್‌ನ ಪಾನಿಪತ್-ಹಿಸಾರ್ (ಎನ್ಎಚ್-709) ಹೆದ್ದಾರಿ ಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.ಈ ಅತ್ಯಾಧುನಿಕ ಟೋಲ್ ಸಂಗ್ರಹವನ್ನು ಈಗ ದೇಶಾದ್ಯಂತ ವಿಸ್ತರಣೆ ಮಾಡಲಾಗಿದೆ.
ಇದಕ್ಕಾಗಿ ಕೇಂದ್ರ ಸರಕಾರ ‘ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರ ನಿಗದಿ ಮತ್ತು ಸಂಗ್ರಹ) ನಿಯಮ-2008’ಕ್ಕೆ ತಿದ್ದುಪಡಿ ತಂದಿದ್ದು, ಅದರ ಜಾಗದಲ್ಲಿ ‘ರಾಷ್ಟ್ರೀಯ ಹೆದ್ದಾರಿ ಶುಲ್ಕ(ನಿಗದಿ ಮತ್ತು ಸಂಗ್ರಹ) ತಿದ್ದುಪಡಿ ನಿಯಮ-2024’ ಜಾರಿಗೊಳಿಸಿದೆ. ಮಂಗಳವಾರದಿಂದಲೇ ದೇಶಾ ದ್ಯಂತ ಹೊಸ ನಿಯಮ ಅನ್ವಯಗೊಂಡಿದೆ. ಆರಂಭಿಕವಾಗಿ ಪ್ರಮುಖ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಇದನ್ನು ಅಳವಡಿಸುವ ಸಾಧ್ಯತೆಯಿದೆ.ಕ್ರಮಿಸಿದ ನಿಖರ ದೂರಕ್ಕೆ ಮಾತ್ರ ಟೋಲ್‌ ಶುಲ್ಕ ಕಟ್ಟಬೇಕು.ಮೊದಲ 20 ಕಿಲೋಮೀಟರ್ ಹೆದ್ದಾರಿ ಪ್ರಯಾಣಕ್ಕೆ ಶುಲ್ಕ ಇರುವುದಿಲ್ಲ.ಇನ್ಮುಂದೆ ಸವಾರರು ಹೆಚ್ಚುವರಿ ಶುಲ್ಕ ಕಟ್ಟುವ ಅಗತ್ಯವಿಲ್ಲ.ಟೋಲ್ ಬೂತ್​ಗಳಲ್ಲಿ ವಾಹನ ಸ್ಲೋ ಮಾಡುವ ಅವಶ್ಯಕತೆಯಿಲ್ಲ.ತಡೆರಹಿತ ಸಂಚಾರದಿಂದ ಟೋಲ್​ಗಳಲ್ಲಿ ಟ್ರಾಫಿಕ್ ಕಿರಕಿರಿಗೆ ಬ್ರೇಕ್ ಹಾಕಲಾಗಿದೆ.ವಾಹನ ಮಾಲೀಕರು ಬಾಹ್ಯ ಮಾರುಕಟ್ಟೆಯಿಂದ ಒಬಿಯು(ಆನ್ ಬೋರ್ಡ್ ಬಾಡು ಯುನಿಟ್) ಎಂಬ ಸಾಧನವನ್ನು  ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬೇಕು. ವಾಹನಕ್ಕೆ ಅಳವಡಿಸಿರುವ ಒಬಿಯು ಉಪಕರಣವು ಚಲನೆಯನ್ನು ಟ್ರ್ಯಾಕ್ ಮಾಡಿ ಉಪಗ್ರಹಕ್ಕೆ ಮಾಹಿತಿ ಕಳುಹಿಸುತ್ತದೆ.ಇದರ ಆಧಾರದ ಮೇಲೆ ಉಪಗ್ರಹವು ವಾಹನ ಕ್ರಮಿಸಿದ ಒಟ್ಟು ದೂರವನ್ನು ಲೆಕ್ಕ ಹಾಕುತ್ತದೆ.ನಿಖರ ಮಾಹಿತಿಗಾಗಿ ಹೆದ್ದಾರಿಯಲ್ಲಿರುವ ಸಿಸಿಟಿವಿಗಳು ವಾಹನದ ಲೋಕೆಶನ್ ಧೃಡಿಕರಿಸುತ್ತದೆ.

 

 

Comments (0)

Your email address will not be published. Required fields are marked *

Back to top button