#Exclusive NewsTop Newsಕ್ರೈಂ ಸ್ಟೋರಿವಿಶೇಷವೈರಲ್ ನ್ಯೂಸ್ಸುದ್ದಿ

ದಾವಣಗೆರೆ ಗ್ಯಾಂಗ್ ರೇಪ್ ಆಗಿದೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದ ವಿದ್ಯಾರ್ಥಿನಿಗೆ ಎಸ್​ಪಿ ಎಚ್ಚರಿಕೆ

ದಾವಣಗೆರೆಯ ನಿಟ್ಟುವಳ್ಳಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಾಕಿದ್ದ ಸುಳ್ಳು ಸುದ್ದಿಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸ್ಪಷ್ಟನೆ ನೀಡಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿದ್ದ ವಿದ್ಯಾರ್ಥಿನಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ…


ದಾವಣಗೆರೆ, ಸೆಪ್ಟೆಂಬರ್​ 06: ದಾವಣಗೆರೆಯಲ್ಲಿ (Davangere) ಗ್ಯಾಂಗ್ ರೇಪ್ ಆಗಿದೆ ಅಂತ ಸಾಮಾಜಿಕ ಜಾಲತಾಣದಲ್ಲಿ (Social Media) ಹರಡಿದ್ದ ಸುಳ್ಳು ಸುದ್ದಿಗೆ ದಾವಣಗೆರೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸ್ಪಷ್ಟನೆ ನೀಡಿದ್ದಾರೆ. ದಾವಣಗೆರೆ ಮೂಲದ ವಿದ್ಯಾರ್ಥಿಯೊಬ್ಬಳು (Student) ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ “ದಾವಣಗೆರೆಯ ನಿಟ್ಟುವಳ್ಳಿಯಲ್ಲಿ ಓರ್ವ ವಿದ್ಯಾರ್ಥಿನಿ ಮೇಲೆ ಯುವಕರಿಂದ ಗ್ಯಾಂಗ್ ರೇಪ್ ಆಗಿದೆ.‌ ಹುಷಾರಾಗಿ ಓಡಾಡಿ.‌ ಒಬ್ಬಂಟಿಯಾಗಿ ಓಡಾಡಬೇಡಿ ಎಂದು ಪೋಸ್ಟ್​ ಹಾಕಿಕಿದ್ದಳು. ಇದು ರಾಜ್ಯಾದ್ಯಂತ ಹರಿದಾಡಿತ್ತು.

ಈ ವಿಚಾರವಾಗಿ ದಾವಣಗೆರೆ ಪೊಲೀಸರು ಪರಿಶೀಲನೆ ನಡೆಸಿದ್ದು, ಸುಳ್ಳು ಸುದ್ದಿ ಅಂತ ಸಾಬೀತಾಗಿದೆ. ಬಳಿಕ ಪೊಲೀಸರು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​​ ಮಾಡಿದ ವಿದ್ಯಾರ್ಥಿನಿ ಮತ್ತು ಆಕೆಯ ಪೋಷಕರನ್ನು ಕರೆಸಿ, ಇನ್ನೊಮ್ಮೆ ಈ ರೀತಿ ಪೋಸ್ಟ್​​ ಹಾಕದಂತೆ ತಾಕೀತು ಮಾಡಿದರು. ಇದು ಅಪರಾಧವಾಗಿದ್ದು, ಮರುಕಳಿಸಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಉಮಾ ಪ್ರಶಾಂತ ಎಚ್ಚರಿಕೆ ನೀಡಿದರು…

Comments (0)

Your email address will not be published. Required fields are marked *

Back to top button