Top Newsಸುದ್ದಿ

ಬೆಂಗಳೂರಲ್ಲಿ ಮಿತಿಮೀರಿದ ಬೌಬೌ ಹಾವಳಿ-16888 ಮಂದಿಗೆ ನಾಯಿ ಕಡಿತ, ಮೂವರು ಬಲಿ

ಬೆಂಗಳೂರು: ನಗರದಲ್ಲಿ ರಕ್ಕಸ ನಾಯಿಗಳ ಆರ್ಭಟ ಮಿತಿ ಮೀರಿದೆ. ಗಲ್ಲಿ ಗಲ್ಲಿಗಳಲ್ಲೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಕೇವಲ ಎಂಟು ತಿಂಗಳಲ್ಲಿ 16888 ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿದೆ. ಇದರ ಜೊತೆಗೆ ನಾಯಿ ಕಡಿತದಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

ನಾಯಿ ಕಚ್ಚಿದ ಪ್ರಕರಣಗಳಲ್ಲಿ ಶೇ.40 ರಷ್ಟು ಸಾಕು ನಾಯಿಗಳ ಪಾತ್ರವೂ ಇರುವುದರಿಂದ ನಗರದಲ್ಲಿ ಜನ ಬೀದಿಯಲ್ಲಿ ಓಡಾಡಬೇಕಾದರೆ ಎಚ್ಚರಿಕೆ ವಹಿಸಬೇಕು ಇಲ್ಲದಿದ್ದರೆ ನಾಯಿ ಕಡಿತಕ್ಕೆ ಒಳಗಾಗಬೇಕಾಗುತ್ತದೆ. ಕಳೆದ ಎಂಟು ತಿಂಗಳಲ್ಲಿ 16888 ಮಂದಿಗೆ ನಾಯಿ ಕಚ್ಚಿರುವುದು ಬಿಬಿಎಂಪಿಯ ಅಂಕಿ ಅಂಶಗಳಿಂದ ಬಹಿರಂಗಗೊಂಡಿದೆ.

ಅದರಲ್ಲೂ ಪೂರ್ವ ಮತ್ತು ಪಶ್ಚಿಮ ವಲಯದಲ್ಲೇ ಅತಿ ಹೆಚ್ಚು ನಾಯಿಗಳ ದಾಳಿ ಪ್ರಕರಣಗಳು ನಡೆದಿರುವುದು ವರದಿಯಲ್ಲಿ ಬಯಲಾಗಿದೆ.

Comments (0)

Your email address will not be published. Required fields are marked *

Back to top button