Top Newsಸುದ್ದಿ

6 ಲಕ್ಷ ರೂ. ಖರ್ಚು ಮಾಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಸಾವು

ಬ್ರಿಟನ್‌ನ ಮಹಿಳೆಯೊಬ್ಬರು ಕಾಸ್ಮೆಟಿಕ್ ಸರ್ಜರಿಯ ವೇಳೆ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಕೇಡೆಲ್ ಬ್ರೌನ್(38) ಮೃತ ಮಹಿಳೆ. ಈಕೆ 5,400 ಪೌಂಡ್‌ ಅಂದರೆ ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ಬಟ್ ಲಿಫ್ಟ್, ಹೊಟ್ಟೆ ಹಾಗೂ ಸ್ತನದ ಆಕಾರವನ್ನು ಹೆಚ್ಚಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಇದೀಗಾ ಆರೋಗ್ಯವಾಗಿದ್ದ ಕೇಡೆಲ್ ಏಕಾಏಕಿ ಸಾವನ್ನಪ್ಪಿರುವುದು ವೈದ್ಯರ ನಿರ್ಲಕ್ಷ್ಯದಿಂದಲೇ ಎಂದು ಕುಟುಂಬಸ್ಥರು ಆರೋಪಿಸಿರುವುದಾಗಿ ದಿ ಸ್ಟ್ಯಾಂಡರ್ಡ್ ವರದಿ ಮಾಡಿದೆ.

ಶಸ್ತ್ರಚಿಕಿತ್ಸೆಯಾದ ಕೇವಲ 10 ಗಂಟೆಗಳ ನಂತರ, ಕೇಡೆಲ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಕೆಲ ಗಂಟೆಗಳ ಬಳಿಕ ಮಹಿಳೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ ಮೃತದೇಹವನ್ನು ನೋಡಲು ಅನುಮತಿ ನೀಡಲಿಲ್ಲ ಮತ್ತು ಮರುದಿನ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಯಿತು ಎಂದು ಕೇಡೆಲ್ ಸಹೋದರಿ ಲೀನ್ನೆ ಹೇಳಿಕೊಂಡಿದ್ದಾಳೆ.

ಕೇಡೆಲ್ ಅವರ ದೇಹವನ್ನು ಅಂತಿಮವಾಗಿ ಯುಕೆಗೆ ಹಿಂದಿರುಗಿಸಿದಾಗ, ಆಕೆಯ ಮೆದುಳು, ಶ್ವಾಸಕೋಶಗಳು ಮತ್ತು ಹೃದಯ ಮೃತದೇಹದಿಂದ ನಾಪತ್ತೆಯಾಗಿದ್ದವು ಎಂದು ಆಕೆಯ ಸಹೋದರಿ ಆರೋಪಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಸದ್ಯ ತನಿಖೆ ಮುಂದುವರಿದಿದೆ.

Comments (0)

Your email address will not be published. Required fields are marked *

Back to top button