Top Newsಸುದ್ದಿ

ಬೆಂಗಳೂರಲ್ಲಿ ತಡರಾತ್ರಿ 2 ಗಂಟೆಯವರೆಗೆ ಹೋಟೆಲ್, ಬಾರ್&ರೆಸ್ಟೋರೆಂಟ್ ಓಪನ್‌ಗೆ ಮನವಿ

ಬೆಂಗಳೂರು: ತಡರಾತ್ರಿ 2 ಗಂಟೆಯವರೆಗೆ ಬಾರ್, ಪಬ್ ಮತ್ತು ರೆಸ್ಟೋರೆಂಟ್‌ಗಳ ಓಪನ್‌ಗೆ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘವು ಅಬಕಾರಿ ಸಚಿವರಿಗೆ ಮನವಿ ಮಾಡಿದೆ.

ಪಬ್, ಬಾರ್ & ರೆಸ್ಟೋರೆಂಟ್ ಲೈಸೆನ್ಸ್ ನವೀಕರಣಕ್ಕೆ ಆನ್‌ಲೈನ್ ಸಮಸ್ಯೆಯಾಗಿದೆ. ಹೆಚ್ಚುವರಿ ಶುಲ್ಕ ಕಟ್ಟಿದರೂ ಲೈಸೆನ್ಸ್ ನೀಡುತ್ತಿಲ್ಲ ಎಂದು ಹೋಟೆಲ್ ಅಸೋಸಿಯೇಷನ್ ಆರೋಪಿಸಿದೆ.

ಅಲ್ಲದೇ ಅಬಕಾರಿ ಇಲಾಖೆಯಲ್ಲಿ ಕಾನೂನು ತೊಡಕಿನ ಆರೋಪವನ್ನೂ ಹೋಟೆಲ್ ಅಸೋಸಿಯೇಷನ್ ಹೊರಿಸಿದೆ. ಕಾನೂನು ಸಬಲೀಕರಣ ಮಾಡದೆ ನಮಗೆ ನೋಟಿಸ್ ಕೊಟ್ಟು ಸಮಸ್ಯೆ ಮಾಡುತ್ತಿದ್ದಾರೆ. ನಗರದಲ್ಲಿ ತಡರಾತ್ರಿ 2 ಗಂಟೆವರೆಗೆ ಹೋಟೆಲ್, ಬಾರ್ & ರೆಸ್ಟೋರೆಂಟ್ ಓಪನ್‌ಗೆ ಅನುಮತಿ ನೀಡುವಂತೆ ಬೃಹತ್ ಬೆಂಗಳೂರು ಹೋಟೆಲ್ ಸಂಘಟನೆಗಳು ಅಬಕಾರಿ ಸಚಿವರಲ್ಲಿ ಮನವಿ ಮಾಡಿದೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button