Top Newsಸುದ್ದಿ

ಸಿಸೇರಿಯನ್‌ ವೇಳೆ ಮಗುವಿನ ಮರ್ಮಾಂಗವನ್ನೇ ಕೊಯ್ದ ವೈದ್ಯ

ದಾವಣಗೆರೆ: ಇಲ್ಲಿನ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ವೈದ್ಯನೊಬ್ಬ ಭಾರೀ ಎಡವಟ್ಟು ಮಾಡಿದ್ದಾನೆ. ಸಿಸೇರಿಯನ್‌ ಮಾಡುವ ವೇಳೆ ಹೊಟ್ಟೆಯಲ್ಲಿದ್ದ ಮಗುವಿನ ಮರ್ಮಾಂಗವನ್ನೇ ವೈದ್ಯ ಕೊಯ್ದ ಘಟನೆ ನಡೆದಿದೆ.

ವೈದ್ಯನನ್ನು ನಿಜಾಮುದ್ದೀನ್ ಎಣದು ಗುರುತಿಸಲಾಗಿದೆ. ಇದೀಗ ಈತನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಘಟನೆ ವಿವರ: ದಾವಣಗೆರೆ ಕೊಂಡಜ್ಜಿ ರಸ್ತೆಯಲ್ಲಿರೋ ಅರ್ಜುನ್ ಪತ್ನಿ ತುಂಬು ಗರ್ಭಿಣಿ ಅಮೃತಾ ಹೆರಿಗೆಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅಂತೆಯೇ ಅವರಿಗೆ ಜೂನ್ 27 ರಂದು ಅಮೃತಾಗೆ ಸಿಸೇರಿಯನ್ ಮಾಡಿ ಮಗು ತೆಗೆಯಲಾಗಿತ್ತು. ಈ ವೇಳೆ ವೈದ್ಯ ಹೊಟ್ಟೆಯಲ್ಲಿದ್ದ ಮಗುವಿನ ಮರ್ಮಾಂಗಕ್ಕೆ ಕತ್ತರಿ ಹಾಕಿದ್ದಾನೆ.

ಘಟನೆಯಿಂದ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನ ಬಾಪೂಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಇಂದು ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.

ವೈದ್ಯನ ಬೇಜಾವ್ದಾರಿತನಕ್ಕೆ ರೊಚ್ಚಿಗೆದ್ದ ಮಗುವಿನ ಕುಟುಂಬಸ್ಥರು ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಮಗುವಿನ ಸಾವಿಗೆ ಕಾರಣನಾದ ವೈದ್ಯನನ್ನ ಕೂಡಲೇ ಅಮಾನತು ಮಾಡಿ, ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button