Freedom TV

ಮೈಸೂರು ನಗರದಲ್ಲಿ-118 ಬಸ್‌ಗಳು ಗುಜರಿ..

ಮೈಸೂರು: ನಗರಕ್ಕೆ 2009 ರಲ್ಲಿ ಖರೀದಿಸಿದ 118 ಬಸ್‌ಗಳು ಗುಜರಿಗೆ ಹಾಕಲು ಗುರುತಿಸಲಾಗಿದೆ. ಮೇ 15 ರೊಳಗೆ 118 ಬಸ್‌ಗಳು ಗುಜರಿ ಸೇರಲಿವೆ.

ಈ ಹಿನ್ನೆಲೆಯಲ್ಲಿ ಬಸ್‌ಗಳ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಬಿಎಂಟಿಸಿ ಸೇರಿದಂತೆ ಇತರೆ ಸಾರಿಗೆ ಘಟಕಗಳಲ್ಲಿನ 20 ಬಸ್‌ಗಳನ್ನು ಎರವಲು ಸೇವೆ ಮೂಲಕ ಪಡೆದು ಮೈಸೂರು ನಗರದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಬಳಸಲಾಗುತ್ತಿದೆ.

ಗುಜರಿ ಸೇರುತ್ತಿರುವ ಬಸ್‌ಗಳು ಮೈಸೂರು ನಗರ ವಿಭಾಗಕ್ಕೆ ಸೇರಿದ ನಾನಾ ಡಿಪೋಗಳಿಂದ ಹಲವು ಮಾರ್ಗದಲ್ಲಿ ಸಂಚರಿಸುತ್ತಿದ್ದವು. ನಿಯಮಾನುಸಾರ 15 ವರ್ಷ ಪೂರೈಸಿದ್ದರಿಂದ ಈ ಬಸ್‌ಗಳು ಸಂಚಾರದಿಂದ ದೂರವುಳಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಹಜವಾಗಿ ಮೈಸೂರು ನಗರ ವಿಭಾಗದಲ್ಲಿ ಬಸ್‌ಗಳ ಕೊರತೆ ಉಂಟಾಗಲಿದೆ.

Comments (0)

Your email address will not be published. Required fields are marked *

Back to top button