Freedom TV

ಹೊಟ್ಟೆ ನೋವಿಗೆ ಕೆಲವೊಂದು ಮನೆಮದ್ದುಗಳು..!

ಹೊಟ್ಟೆ ನೋವು ಅನೇಕ ಪರಿಸ್ಥಿತಿಗಳಿಂದ ಉಂಟಾಗಬಹುದು. ಆದಾಗ್ಯೂ, ಪ್ರಮುಖ ಕಾರಣಗಳು ಸೋಂಕು, ಅಸಹಜ ಬೆಳವಣಿಗೆಗಳು, ಉರಿಯೂತ, ತಡೆಗಟ್ಟುವಿಕೆ ಮತ್ತು ಕರುಳಿನ ಅಡಚಣೆಗಳು.

ಹೊಟ್ಟೆ ನೋವು ಬಂದಾಗ ಅಥವಾ ಹೊಟ್ಟೆ ಹಿಡಿದುಕೊಂಡಂತೆ ಆದಾಗ ಸ್ವಲ್ಪ ಇಂಗು ನೀರಿಗೆ ಹಾಕಿ ಕುದಿಸಿ ಕುಡಿಯಿರಿ.

ಇಂಗು ಬೆರಿಸಿದ ನೀರು ಕುಡಿದರೆ, ಹೊಟ್ಟೆ ನೋವು ಕೂಡಲೇ ಕಮ್ಮಿ ಆಗುತ್ತೆ ಅನೇಕ ಕಾರಣಗಳಿಂದ ನಮಗೆ ಹೊಟ್ಟೆ ನೋವು ಬರುತ್ತದೆ. ಕೆಲವೊಮ್ಮೆ ಸಿಹಿ ಹೆಚ್ಚಾಗಿ ತಿಂದರೂ ಬರುತ್ತದೆ. ಇನ್ನು ಕೆಲವೊಮ್ಮೆ ಸರಿಯಾಗಿ ನೀರು ಕುಡಿಯದೇ ಹೋದರೆ ಹೊಟ್ಟೆ ನೋವು ಬರಬಹುದು.

ಅತಿ ಹೆಚ್ಚು ಆಮ್ಲೀಯತೆಯ ಕಾರಣ ಹೊಟ್ಟೆ ನೋವು ಕಂಡುಬಂದರೆ ಚೆನ್ನಾಗಿ ಕಾಯಿಸಿ ಆರಿಸಿದ ಹಾಲಿಗೆ ಸ್ವಲ್ಪ ನೀರು ಬೆರೆಸಿ ಹಾಲು ತಂಪಾಗಿರುವ ಸಂದರ್ಭದಲ್ಲಿ ಸೇವನೆ ಮಾಡಿದರೆ ಹೊಟ್ಟೆ ನೋವು ಬಹಳ ಬೇಗನೆ ಪರಿಹಾರವಾಗುತ್ತದೆ.

ಅಪ್ಪಿತಪ್ಪಿ ನಿಮ್ಮ ಹೊಟ್ಟೆಯಲ್ಲಿ ಹುಳುಗಳ ಕಾರಣದಿಂದ ಹೊಟ್ಟೆ ನೋವು ಕಂಡು ಬಂದರೆ ಅತ್ಯಂತ ಪರಿಣಾಮಕಾರಿಯಾಗಿ ದಾಳಿಂಬೆ ಹಣ್ಣಿನ ಸಿಪ್ಪೆಯಿಂದ ನೀವು ನಿಮ್ಮ ಹೊಟ್ಟೆ ನೋವನ್ನು ನಿವಾರಣೆ ಮಾಡಿಕೊಳ್ಳಬಹುದು.

ಮುಟ್ಟಿನ ಕಾರಣದಿಂದ ಹೊಟ್ಟೆ ನೋವು ಅನುಭವಿಸುತ್ತಿರುವ ಮಹಿಳೆಯರಿಗೆ ಪರಂಗಿ ಹಣ್ಣಿನ ಜ್ಯೂಸ್ ಅತ್ಯಂತ ಪರಿಣಾಮಕಾರಿ ಎಂದು ಹೇಳುತ್ತಾರೆ.

 

Comments (0)

Your email address will not be published. Required fields are marked *

Back to top button