ಸುದ್ದಿ

ಇಸ್ರೇಲ್​ ಮನವಿ ಮೇರೆಗೆ ತುರ್ತು ಸಭೆ ಕರೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ

ವಾಷಿಂಗ್ಟನ್: ಇಸ್ರೇಲ್ ಮೇಲಿನ ಇರಾನ್ ಡ್ರೋನ್, ಕ್ಷಿಪಣಿ ದಾಳಿಯನ್ನು ಬಲವಾಗಿ ಖಂಡಿಸಿರುವ ಅಮೆರಿಕ ಶತಾಗತಾಯ ಇಸ್ರೇಲ್ ರಕ್ಷಣೆಗೆ ಬದ್ಧ ಎಂದಿರುವ ಅಮೆರಿಕ G-7 ನಾಯಕರ ಸಭೆಗೆ ಆಗ್ರಹಿಸಿದೆ.

ಇಸ್ರೇಲ್ ಮೇಲೆ ಇರಾನ್ ದಾಳಿ ಮಾಡಲು ಸನ್ನದ್ಧ ಸ್ಥಿತಿಯಲ್ಲಿರುವಂತೆಯೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಪ್ರತಿಕ್ರಿಯೆ ನೀಡಿ ಇರಾನ್ ಮುಂದುವರೆಯದಂತೆ ಎಚ್ಚರಿಕೆ ನೀಡಿದ್ದಾರೆ.ಸಿರಿಯಾ ದಾಳಿಗೆ ಪ್ರತೀಕಾರ: ಇಸ್ರೇಲ್​ ಮೇಲೆ ಡ್ರೋಣ್​, ಕ್ಷಿಪಣಿ ಮಳೆಗೆರೆದ ಇರಾನ್, ದೂರ ಇರುವಂತೆ ಅಮೆರಿಕಾಗೆ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ಇಸ್ರೇಲ್ ಮೇಲಿನ ಇರಾನ್ ದಾಳಿಯನ್ನು ಖಂಡಿಸಿರುವ ಬೈಡನ್ ಜಾಗತಿಕ ಸಂಘಟಿತ ಪ್ರತಿಕ್ರಿಯೆಗಾಗಿ G-7 ನಾಯಕರ ಸಭೆ ಕರೆಯಬೇಕು ಎಂದು ಹೇಳಿದ್ದಾರೆ. ಇರಾನ್ ಉಡಾಯಿಸಿದ 200 ಕ್ಕೂ ಹೆಚ್ಚು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ತಾನು ಮತ್ತು ತನ್ನ ಮಿತ್ರರಾಷ್ಟ್ರಗಳು ಯಶಸ್ವಿಯಾಗಿ ಹೊಡೆದುರುಳಿಸಿವೆ. ಯೆಮೆನ್, ಸಿರಿಯಾ ಮತ್ತು ಇರಾಕ್‌ನಿಂದ ಕಾರ್ಯನಿರ್ವಹಿಸುತ್ತಿರುವ ಇರಾನ್ ಮತ್ತು ಅದರ ಪ್ರಾಕ್ಸಿಗಳು ಇಸ್ರೇಲ್‌ನಲ್ಲಿನ ಮಿಲಿಟರಿ ಸೌಲಭ್ಯಗಳ ಮೇಲೆ ವೈಮಾನಿಕ ದಾಳಿಯನ್ನು ಪ್ರಾರಂಭಿಸಿವೆ. ಈ ದಾಳಿಗಳನ್ನು ನಾನು ಪ್ರಬಲವಾದ ಪದಗಳಲ್ಲಿ ಖಂಡಿಸುತ್ತೇನೆ ಎಂದು ಹೇಳಿದರು.

 

Comments (0)

Your email address will not be published. Required fields are marked *

Back to top button