Freedom TV

ಬೆಂಗಳೂರಿಗರೇ ಇನ್ನು ಮುಂದೆ ಉರಿಉರಿ ಬಿಸಿಲು!

ಬೆಂಗಳೂರು : ಸಾಧಾರಣ ತಂಪಾಗಿದ್ದ ಬೆಂಗಳೂರು. ಇನ್ನು ಮುಂದೆ ಉರಿ ಬಿಸಿಲನ್ನ ನೀಡಿ ಕಿರಿ ಕಿರಿ ಉಂಟುಮಾಡಲಿದಿಯಾ? ಯಸ್ ವರ್ಷ ಪೂರ್ತಿ ಒಂದೆ ತೆರನಾದ ತನ್ನ ವಾತಾವರಣದಿಂದಲೇ ಹೆಸರಾಗಿದ್ದ ಉದ್ಯಾನ ನಗರಿ ಬೆಂಗಳೂರು ನಗರವು ಈ ಬಾರಿ ಬಹುದಿನಗಳ ನಿರಂತರ ಶಾಖದ ಅಲೆಗೆ ಸಾಕ್ಷಿಯಾಗುತ್ತಿದೆ.

ತಾಪಮಾನದ ಏರಿಳಿತ ಮುಂದುವರೆದಿದೆ. ಮುಂದಿನ ಒಂದು ವಾರ ಅಂದ್ರೆ (ಏ.2 ರತನಕ) ರಾಜಧಾನಿಯಲ್ಲಿ ತಾಪಮಾನ ಮತ್ತಷ್ಟು ಏರಿಕೆ ಆಗಲಿದೆ. ಬಿಸಿ ಗಾಳಿಯ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿ ಪ್ರತಿ ದಿನ 36 ರಿಂದ 40 ಡಿಗ್ರಿ ತಾಪಮಾನ ಹೆಚ್ಚಳ ಸಾದ್ಯತೆ. ಮಳೆ ಕೊರತೆ ಕಾರಣದಿಂದ‌ ಬೆಂಗಳೂರು ನಗರದಲ್ಲಿ ಉಷ್ಣಾಂಶ ಹೆಚ್ಚಳ.

ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ತಾಪಮಾನ ಏರುಗತಿಯಲ್ಲಿ ಸಾಗಿದೆ. ಕೆಲವು ಜಿಲ್ಲೆಗಳಲ್ಲಿ ಮಳೆ ಬಂದಿದ್ದು, ಬೆಂಗಳೂರಿಗೆ ಮಳೆಯ ಸುಳಿವೆ ಇಲ್ಲದಾಗಿದೆ. ಬೇಸಿಗೆಯ ಮಧ್ಯ ಭಾಗದಲ್ಲಿರುವ ಬೆಂಗಳೂರಿಗರು ಇನ್ನೂ ಕನಿಷ್ಠ ಎರಡು ತಿಂಗಳ ಈ ಉರಿ ಬಿಸಿಲನ್ನು ಸಹಿಸಿಕೊಳ್ಳಬೇಕಿದೆ. ನಗರದಲ್ಲಿ ಈ ಹಿಂದೆ ಗರಿಷ್ಠ 36 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು. ಅದಾದ ಬಳಿಕ ನಿತ್ಯ 34 ಡಿಗ್ರಿ ಸೆಲ್ಸಿಯಸ್ ಆಸುಪಾಸು ತಾಪಮಾನ ದಾಖಲಾಗುತ್ತಿತ್ತು.

ಏಪ್ರಿಲ್ 2ರವರೆಗೆ ಹೇಗಿರಲಿದೆ ಉಷ್ಣಾಂಶ? ಇಂದು ಮಾರ್ಚ್ 28ರ ಗುರುವಾರ 35 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ನಾಳೆ ಶುಕ್ರವಾರವು ಮುಂದುವರಿಯಲಿದೆ ಶನಿವಾರ ಮಾರ್ಚ್ 30ರಿಂದ ಏಪ್ರಿಲ್ 02ರವರೆಗೂ ಅತ್ಯಧಿಕ ತಾಪಮಾನ ಕಂಡು ಬರಲಿದೆ. ಈ ವೇಳೆ ನಿತ್ಯವು ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Comments (0)

Your email address will not be published. Required fields are marked *

Back to top button