ಸುದ್ದಿ

ಓವೈಸಿ ವಿರುದ್ಧ ಕಾಂಗ್ರೆಸ್​​ನಿಂದ ಸಾನಿಯಾ ಸ್ಪರ್ಧೆ ?

ಹೈದರಾಬಾದ್​​ : ಈ ಬಾರಿ ಲೋಕಸಭೆ ಚುನಾವಣೆಗೆ ಹೈದರಾಬಾದ್​​ ಕ್ಷೇತ್ರಕ್ಕೆ ಹಾಲಿ ಸಂಸದ, ಎಂಐಎಂ  ನಾಯಕ ಅಸಾದುದ್ದೀನ್​ ಓವೈಸಿ  ವಿರುದ್ಧ ಟೆನ್ನಿಸ್​​ ತಾರೆ ಸಾನಿಯಾ ಮಿರ್ಜಾರನ್ನು ಕಣಕ್ಕಿಳಿಸಲು ಕಾಂಗ್ರೆಸ್​ ಮುಂದಾಗಿದೆ ಎನ್ನಲಾಗಿದೆ. ಹೈದರಾಬಾದ್​ ಎಐಎಂಐಎಂ ಪಕ್ಷದ  ಭದ್ರಕೋಟೆಯಾಗಿದ್ದು, 1980 ರ ಬಳಿಕ ಇಲ್ಲಿ ಕಾಂಗ್ರೆಸ್​ ಗೆಲುವು  ಸಾಧಿಸಿಲ್ಲ. ಹೀಗಾಗಿ ಮತ್ತೆ ಹೈದರಾಬಾದ್​​ನನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ತೆಲಂಗಾಣ ಕಾಂಗ್ರೆಸ್​​ ಮುಖಂಡ ಹಾಗೂ ಮಾಜಿ ಕ್ರಿಕೆಟ್​​ ನಾಯಕ ಅಜರುದ್ದೀನ್​ ಸಾನಿಯಾ ಹೆಸರನ್ನು  ಶಿಫಾರಸ್ಸು  ಮಾಡಿದ್ದಾರೆ ಎನ್ನಲಾಗಿದೆ. ಸಾನಿಯಾ, ಅಜರುದ್ದೀನ್​ ಸಂಬಂಧಿಯಾಗಿದ್ದಾರೆ.

Comments (0)

Your email address will not be published. Required fields are marked *

Back to top button