Freedom TV

ಬೆಳಗಾವಿ ಚೆಕ್ ಪೋಸ್ಟ್ ನಲ್ಲಿ ಸೀಜ್ ಆದ ನಗದು ಎಷ್ಟು ಗೊತ್ತಾ?

ಬೆಳಗಾವಿ : ಬೆಳಗಾವಿಯಲ್ಲಿ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಫುಲ್ ಅಲರ್ಟಾಗಿದ್ದಾರೆ. ಅಕ್ರಮವಾಗಿ ಸಾಗಿಸುತ್ತಿದ್ದ 2 ಲಕ್ಷ ಹಣವನ್ನು ಚೆಕ್ ಪೋಸ್ಟ್ ನಲ್ಲಿ ಸೀಜ್ ಮಾಡಿದ್ದಾರೆ.

ಮೂಡಲಗಿ ಪೊಲೀಸರು ಹಳ್ಳೂರು ಚೆಕ್ ಪೋಸ್ಟ್ ನಲ್ಲಿ ಹಣ ಸೀಜ್ ಮಾಡಿ, ನಾಲ್ವರು ಆರೋಪಿಗಳ ಬಂಧಿಸಿ , ಒಂದು ಅಲ್ಟೊ ಕಾರ್ ಸೀಜ್ ಮಾಡಿದ್ದಾರೆ. ಗೋಣಿ ಚೀಲದಲ್ಲಿ 2ಲಕ್ಷ ಹಣ ಸಾಗಾಟ ಮಾಡ್ತಿದ್ದ ಆರೋಪಿಗಳು, ಜೊತೆಗೆ ಹಣಕ್ಕೆ ಬ್ಲಾಕ್ ಕಲರ್ ಕವರ್ ಹಾಕಿ ಹಣ ಸಾಗಾಟ ಮಾಡ್ತಿದ್ದರು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಿದ್ದಾರೆ.

Comments (0)

Your email address will not be published. Required fields are marked *

Back to top button