Kalburgi

ರೈತರಿಗೆ ಇತ್ತ ಭೂಮಿಯೂ ಇಲ್ಲ, ಅತ್ತ ಕೆಲಸವೂ ಇಲ್ಲ!

kalaburgi Farmers protest on Cement factory

ಕಲಬುರಗಿ: ಸಿಮೆಂಟ್ ಕಾರ್ಖಾನೆ ಸ್ಥಾಪಿಸುವುದಾಗಿ ಹೇಳಿ ರೈತರ ಭೂಮಿ ಕಸಿದು ‘ಗುಲಬರ್ಗಾ ಸಿಮೆಂಟ್ ಕಂಪನಿ’ ರೈತರಿಗೆ ಮೋಸವೆಸಗಿದೆ.ಭೂಮಿ ಕೊಟ್ಟ ತಪ್ಪಿಗೆ ಈಗ ಇತ್ತ ಉದ್ಯೋಗವೂ ಇಲ್ಲ, ಅತ್ತ ಸಾಗುವಳಿ ಮಾಡಲು ಭೂಮಿಯೂ ಇಲ್ಲದಂತಾಗಿದೆ. ಕಾರ್ಖಾನೆ ಸ್ಥಾಪನೆಯ ಭರವಸೆ ನಂಬಿ ಜಮೀನು ನೀಡಿದ್ದ ಅನ್ನದಾತರು, ಈಗ ನ್ಯಾಯಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ
2013ರಲ್ಲಿ ಕೆ.ಐ.ಎ.ಡಿ.ಬಿ. (KIADB) ಮೂಲಕ ಕಲಬುರಗಿ ತಾಲ್ಲೂಕಿನ ಹೊನ್ನಕೀರಣಗಿ, ಸೋಮನಾಥಹಳ್ಳಿ ಹಾಗೂ ಫಿರೋಜಾಬಾದ್ ಗ್ರಾಮಗಳ ಒಟ್ಟು 1,821 ಎಕರೆ ಜಮೀನನ್ನು ‘ಗುಲಬರ್ಗಾ ಸಿಮೆಂಟ್ ಕಂಪನಿ’ ಸ್ಥಾಪನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ, ಭೂಮಿ ಸ್ವಾಧೀನವಾಗಿ 11 ವರ್ಷ ಕಳೆದರೂ ಆ ಜಾಗದಲ್ಲಿ ಕಾಮಗಾರಿಯೇ ನಡೆದಿಲ್ಲ.

ಪರಿಹಾರ ಧನದಲ್ಲಿ ಮಹಾಮೋಸ
ಜಿಲ್ಲಾಧಿಕಾರಿಗಳು ಪ್ರತಿ ಎಕರೆಗೆ 16 ಲಕ್ಷ ರೂ. ಬೆಲೆ ನಿಗದಿ ಮಾಡಿದ್ದರು. ಆದರೆ ಕಂಪನಿಯು ಅದನ್ನು 12 ಲಕ್ಷಕ್ಕೆ ಇಳಿಸಿ, ಅದರಲ್ಲೂ ಕಡಿಮೆ ಹಣ ನೀಡಿ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ರೈತರು ದೂರಿದ್ದಾರೆ.

ಕಾರ್ಖಾನೆ ಸ್ಥಾಪನೆಗೆ ಕಟಿಬದ್ಧ ಉದ್ಯೋಗ ನೀಡಲು ನಾವು ಸಿದ್ಧ ಎಂಬ ಸೂತ್ರದಡಿ ಪುಸಲಾಯಿಸಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳಲಾಯಿತು.ಉದ್ಯೋಗ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಭಾರಿ ನಿರಾಸೆಯಾಗಿದೆ. ಈವರೆಗೂ ಯಾವುದೇ ಕಾರ್ಖಾನೆ ಸ್ಥಾಪನೆಯಾಗಿಲ್ಲ.

ಅನ್ನದಾತರು ಈಗ ನಿರಾಶ್ರಿತರು-ಪೂರ್ವಜರಿಂದ ಕೃಷಿ ಮಾಡಿಕೊಂಡು ಬದುಕುತ್ತಿದ್ದ ಕುಟುಂಬಗಳು ಇಂದು ಸ್ವಂತ ಭೂಮಿಯೂ ಇಲ್ಲದೆ, ಆದಾಯವೂ ಇಲ್ಲದೆ ಬೀದಿ ಪಾಲಾಗಿವೆ.ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಕುಳಿತಿರುವ ರೈತರು ಎರಡು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ

ಭೂಮಿ ವಾಪಸ್ ನೀಡಿ: ಕಾರ್ಖಾನೆ ನಿರ್ಮಾಣ ಮಾಡದ ಕಾರಣ, ನಮ್ಮ ಜಮೀನನ್ನು ನಮಗೇ ಹಿಂತಿರುಗಿಸಿ, ನಾವು ಕೃಷಿ ಚಟುವಟಿಕೆ ಮಾಡಿಕೊಳ್ಳುತ್ತೇವೆ ಇಲ್ಲವೇ ಬಾಕಿ ಪಾವತಿಸಿ,ನಿಗದಿಪಡಿಸಿದ ಬಾಕಿ ಹಣವನ್ನು ಮತ್ತು ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಸೂಕ್ತ ಪರಿಹಾರ ನೀಡಿ ಎಂದು ಆಗ್ರಹಿಸಿದ್ದಾರೆ. ನಮ್ಮ ಮಕ್ಕಳಿಗೆ ಉದ್ಯೋಗ ಸಿಗುತ್ತದೆ ಎಂಬ ಭರವಡೆಯ ಮೇರೆಗೆ ಭೂಮಿ ನೀಡಿದ್ದೆವು. ಆದರೆ ಈಗ ಉದ್ಯೋಗವೂ ಇಲ್ಲ,ಭೂಮಿಯೂ ಇಲ್ಲ. ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ನಮಗೆ ನ್ಯಾಯ ಕೊಡಿಸಬೇಕು,” ದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

#Kalaburagi #FarmersProtest #KIADB #LandScam #JusticeForFarmers #GulbargaCement #KarnatakaNews #FarmerStruggle #BreakingNews #FreedomTV

Comments (0)

Your email address will not be published. Required fields are marked *

Back to top button