ಯು.ಟಿ. ಖಾದರ್‌ಗೆ ಘೇರಾವ್; 10 ಮಂದಿ ವಿರುದ್ಧ FIR ದಾಖಲು!
Korgajja circle issue - protest on u t khader fir on 10 people


ಮಂಗಳೂರು: ಕುತ್ತಾರು ಸರ್ಕಲ್‌ಗೆ ಕೊರಗಜ್ಜ ದೈವದ ಹೆಸರಿಡುವ ವಿಚಾರವಾಗಿ ಉಂಟಾದ ಭಿನ್ನಾಭಿಪ್ರಾಯ ಈಗ ಪೊಲೀಸ್ ಮೆಟ್ಟಿಲೇರಿದೆ. ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಉಳ್ಳಾಲದಲ್ಲಿ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ 10 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕೊರಗಜ್ಜ ಸರ್ಕಲ್ ವಿವಾದ
ಮಂಗಳೂರಿನ ಕುತ್ತಾರು ಎಂಬಲ್ಲಿ ಖಾಸಗಿ ಮೆಡಿಕಲ್ ಕಾಲೇಜು ವತಿಯಿಂದ ಸರ್ಕಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು,ಮೆಡಿಕಲ್ ಕಾಲೇಜೇ ನಿರ್ವಹಣಾ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಕುತ್ತಾರು ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜನ ಮೂಲ ಕ್ಷೇತ್ರವಾಗಿರುವುದರಿಂದ, ಭಕ್ತರು ಹಾಗೂ ವಿಶ್ವ ಹಿಂದೂ ಪರಿಷತ್ ಈ ವೃತ್ತಕ್ಕೆ ‘ಕೊರಗಜ್ಜ ಸರ್ಕಲ್’ ಎಂದು ಹೆಸರಿಡಲು ಮತ್ತು ದೈವದ ಪ್ರತಿಕೃತಿಯನ್ನು ಅಲ್ಲಿ ಪ್ರತಿಷ್ಠಾಪಿಸಲು ಮುಂದಾಗಿದ್ದಾರೆ. ಆದರೆ,ಈ ನಿರ್ಧಾರದ ವಿರುದ್ಧ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಕೊರಗಜ್ಜ ಸರ್ಕಲ್ ವಿಚಾರವಾಗಿ ಉಳ್ಳಾಲದಲ್ಲಿ ಯು.ಟಿ.ಖಾದರ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಯುವಕರು ಘೇರಾವ್ ಹಾಕಿ ವಾಗ್ವಾದಕ್ಕೆ ಮುಂದಾಗಿದ್ದರು.
ಪೊಲೀಸ್ ದೂರು ಮತ್ತು FIR
ಯು.ಟಿ. ಖಾದರ್ ಅವರು ಉಳ್ಳಾಲದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ, ಮದನಿನಗರ ನಿವಾಸಿ ಜುನೈದ್ ತಂಡ ಸ್ಪೀಕರ್ ಗೆ ಘೇರಾವ್ ಹಾಕಿ ವಾಗ್ವಾದ ನಡೆಸಿತ್ತು. ಸರ್ಕಲ್ ನಿರ್ಮಾಣ ಮತ್ತು ಹೆಸರಿಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ಸಾರ್ವಜನಿಕವಾಗಿ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ, ಖಾದರ್ ಅವರ ಅಂಗರಕ್ಷಕ ಮೊಹಮ್ಮದ್ ಯಾಸಿನ್ ಅವರು ನೀಡಿದ ದೂರಿನ ಮೇರೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾರಿ ತಪ್ಪಿದವರ ಕೆಲಸ – ಖಾದರ್ ಸ್ಪಷ್ಟನೆ
ತಮಗೆ ಘೇರಾವ್ ಹಾಕಿದ ಘಟನೆಗೆ ಸಂಬಂಧಿಸಿದಂತೆ ಸ್ಪೀಕರ್ ಯು.ಟಿ. ಖಾದರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.”ಯಾರೋ ಕೆಲವರು ದಾರಿ ತಪ್ಪಿದವರು ಸೋಷಿಯಲ್ ಮೀಡಿಯಾದಲ್ಲಿ ಏನು ಮಾಡುತ್ತಾರೋ ಅದನ್ನೆಲ್ಲಾ ಕೇಳಲು ಸಾಧ್ಯವಿಲ್ಲ. ಪ್ರತಿಭಟನೆ ನಡೆಸಿದವರು ಮದನಿನಗರದವರಲ್ಲ, ಅವರು ಬೇರೆ ಯಾವುದೋ ಸಂಘಟನೆಗೆ ಸೇರಿದವರು ಮತ್ತು ಹೊರಗಿನ ವ್ಯಕ್ರಿಗಳು . ಸರ್ವರ ಹಿತದೃಷ್ಟಿಯಲ್ಲಿ ಕೆಲಸಗಳು ನಡೆಯುತ್ತಲೇ ಇರುತ್ತವೆ ಎಂದು ಅವರು ತಿರುಗೇಟು ನೀಡಿದ್ದಾರೆ.
#Mangaluru #Ullal #UTKhader #KoragajjaCircle #Kuttaru #FIR #DakshinaKannada #KarnatakaPolitics #ReligiousHarmony #BreakingNews #FreedomTV #PoliceAction