Wednesday, December 10, 2025
26.8 C
Bengaluru
Google search engine
LIVE
ಮನೆ#Exclusive NewsTop Newsದಶಕಗಳ ಕನಸು ನನಸಾಯಿತು.!

ದಶಕಗಳ ಕನಸು ನನಸಾಯಿತು.!

ಬೆಂಗಳೂರು: ಸಹಜ ಸಮೃದ್ಧ ಬಳಗದ ಬೀಬಿ ಫಾತಿಮಾ ಮಹಿಳಾ ಸಂಘಕ್ಕೆ ‘ಈಕ್ವೇಟರ್ ಇನಿಷಿಯೇಟಿವ್’ ಪ್ರಶಸ್ತಿ

ಜೀವ ವೈವಿಧ್ಯ ಸಂರಕ್ಷಣಾ ಕ್ಷೇತ್ರದ ನೋಬೆಲ್ ಎಂದೇ ಹೆಸರಾಗಿರುವ UNDP ಕೊಡಮಾಡುವ ‘ ಈಕ್ವೇಟರ್ ಇನಿಷಿಯೇಟಿವ್’ ಪ್ರಶಸ್ತಿ ಧಾರವಾಡ ಜಿಲ್ಲೆ ಕುಂದಗೋಳದ ತೀರ್ಥ ಗ್ರಾಮದ ‘ ಬೀಬಿ ಫಾತಿಮ ಮಹಿಳಾ ಸಂಘಕ್ಕೆ’ ಲಭಿಸಿದೆ.

103 ದೇಶಗಳ 700 ಸ್ಪರ್ಧಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಬೀಬಿ ಫಾತಿಮ‌ ಮಹಿಳಾ ಸಂಘ , ಅರ್ಜೆಂಟೈನಾ, ಪೆರು, ತಾಂಜೇನಿಯ, ಇಂಡೋನೇಷಿಯಾ, ಬ್ರೆಜಿಲ್, ಈಕ್ವೆಡಾರ್ , ಪಪು ನ್ಯೂ ಗುನಿಯ, ಮತ್ತು ಕಿನ್ಯಾ ದೇಶದ ಇತರೆ ಎಂಟು ಸಂಸ್ಥೆಗಳ ಜೊತೆಗೂಡಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಬೀಬಿಜಾನ್ ನಾಯಕತ್ವದಲ್ಲಿ ಸಮುದಾಯ ಬೀಜ ಬ್ಯಾಂಕ್, ಸಿರಿಧಾನ್ಯ ಸಂಸ್ಕರಣಾ ಘಟಕ, ನೈಸರ್ಗಿಕ ಕೃಷಿಯನ್ನು ಜನಪ್ರಿಯಗೊಳಿಸಿದ, 30 ಗ್ರಾಮಗಳಲ್ಲಿ ಸಿರಿಧಾನ್ಯ ಬೆಳೆಗಳ ಮರುಳಿ ತಂದ ಮಹಿಳಾ ಸಂಘದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

10,000 ಅಮೇರಿಕನ್ ಡಾಲರ್ ( 8.5 ಲಕ್ಷ)ದ ಪ್ರಶಸ್ತಿ ಇದು. ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ‘ ಜೀವ ವೈವಿಧ್ಯ ಸಂರಕ್ಷಾ ಕೇಂದ್ರ’ ಕಟ್ಟುವ ಕನಸು ಮಹಿಳಾ ಸಂಘದ್ದು.

ಕರ್ನಾಟಕ ಸರ್ಕಾರ ಬೀಬಿ ಫಾತಿಮ ಮಹಿಳಾ ಸಂಘದ ಸಾಧನೆಯನ್ನು ಗುರುತಿಸಿ ಅಗತ್ಯ ಸಹಕಾರ ನೀಡಿದರೆ ಇನ್ನಷ್ಟು ಹಳ್ಳಿಗಾಡಿನ ರೈತ ಮಹಿಳೆಯರನ್ನು ಬೀಜ ಸಂರಕ್ಷಣೆಗೆ ತೊಡಗಿಸಬಹುದು. ಕರ್ನಾಟಕದ ಹೆಸರನ್ನು ಜಾಗತಿಕ ಮಟ್ಟಕ್ಕೆ ಹರಡಬಹುದು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments