Wednesday, December 10, 2025
26.8 C
Bengaluru
Google search engine
LIVE
ಮನೆಜಿಲ್ಲೆಪ್ರೀತಿ ವಿಚಾರಕ್ಕೆ ಗಲಾಟೆ; ಯುವತಿ ಚಿಕ್ಕಪ್ಪನಿಂದ ಯುವಕನಿಗೆ ಚಾಕು ಇರಿತ

ಪ್ರೀತಿ ವಿಚಾರಕ್ಕೆ ಗಲಾಟೆ; ಯುವತಿ ಚಿಕ್ಕಪ್ಪನಿಂದ ಯುವಕನಿಗೆ ಚಾಕು ಇರಿತ

ಹುಬ್ಬಳ್ಳಿ: ಪ್ರೀತಿ ವಿಚಾರಕ್ಕೆ ಸಂಬಂಧಿಸಿದ ಗಲಾಟೆಯೊಂದರಲ್ಲಿ ಯುವಕನಿಗೆ ಚಾಕು ಇರಿದಿರುವ ಘಟನೆ ಹುಬ್ಬಳ್ಳಿಯ ಸದರಸೂಪಾ ಓಣಿಯಲ್ಲಿ ನಡೆದಿದೆ. ಗೌಸ್​​ ಮೊಯಿನುದ್ದೀನ್ ಚಾಕು ಇರಿತಕ್ಕೆ ಒಳಗಾದ ಯುವಕನಾಗಿದ್ದು ಕಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತಮ್ಮ ಮನೆಯ ಯುವತಿಯನ್ನು ಪ್ರೀತಿಸುತ್ತಿದ್ದಾನೆ ಎಂದು ಎಂಬ ಕೋಪಕ್ಕೆ ಗೌಸ್​​ ಮೊಯಿನುದ್ದೀನ್​ಗೆ ವಸೀಂ ಎಂಬಾತ ಚಾಕು ಇರಿದಿದ್ದಾನೆ ಎಂಬ ಆರೋಪವಿದೆ. ಯುವತಿಯೇ ಕರೆ ಮಾಡಿ ಮೊಯಿನುದ್ದೀನ್​​ನನ್ನು ಓಣಿಗೆ ಕರೆಸಿಕೊಂಡಿದ್ದಾಳೆ. ಯುವತಿಯ ಮಾತು ನಂಬಿ ಬಂದಿದ್ದ ಗೌಸ್​ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ.

ಕೂಡಲೇ ಗೌಸ್​ನನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಘಟನೆ ಸಂಬಂಧ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಕು ಇರಿದ ಆರೋಪಿ ವಸೀಂ ಹಾಗೂ ಯುವತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಇನ್ನು ಪ್ರಕರಣದ ಸುದ್ದಿ ತಿಳಿದು ಹುಬ್ಬಳ್ಳಿ-ಧಾರವಾಡ ಕಮೀಷನರ್​ ಎನ್​. ಶಶಿಕುಮಾರ್​​ ಕಿಮ್ಸ್​ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಅಧಿಕಾರಿಗಳಿಂದ ಪ್ರಕರಣದ ಕುರಿತು ಮಾಹಿತಿ ಪಡೆದುಕೊಂಡರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments