Tuesday, February 10, 2026
22.9 C
Bengaluru
Google search engine
LIVE
ಮನೆದೇಶ/ವಿದೇಶಪಾಕ್‌ಗೆ ಮರ್ಮಾಘಾತ: 'ಆಪರೇಷನ್ ಹೇರೋಫ್'ಗೆ 200ಕ್ಕೂ ಹೆಚ್ಚು ಸೈನಿಕರು ಬಲಿ

ಪಾಕ್‌ಗೆ ಮರ್ಮಾಘಾತ: ‘ಆಪರೇಷನ್ ಹೇರೋಫ್’ಗೆ 200ಕ್ಕೂ ಹೆಚ್ಚು ಸೈನಿಕರು ಬಲಿ

ಇಸ್ಲಾಮಾಬಾದ್/ಬಲೂಚಿಸ್ತಾನ್: ಪಾಕಿಸ್ತಾನದ ಪಾಲಿಗೆ ಬಲೂಚಿಸ್ತಾನ್ ಪ್ರಾಂತ್ಯ ಈಗ ಅಕ್ಷರಶಃ ನರಕವಾಗಿ ಮಾರ್ಪಟ್ಟಿದೆ. ಬಲೂಚ್ ಲಿಬರೇಷನ್ ಆರ್ಮಿ (BLA) ಹಮ್ಮಿಕೊಂಡಿರುವ ‘ಆಪರೇಷನ್ ಹೇರೋಫ್ ಫೇಸ್-2’ ದಾಳಿಗೆ ಪಾಕಿಸ್ತಾನ ಸೇನೆ ತತ್ತರಿಸಿ ಹೋಗಿದ್ದು, ಕಳೆದ 40 ಗಂಟೆಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಬಲಿಯಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ರಂಗಪ್ರವೇಶ ಮಾಡಿದ ಮಹಿಳಾ ಬಾಂಬರ್‌ಗಳು!

ಈ ಬಾರಿಯ ದಾಳಿಯಲ್ಲಿ ಬಿಎಲ್‌ಎ ಮಹಿಳಾ ‘ಫಿದಾಯಿ’ಗಳನ್ನು (Suicide Bombers) ಅಸ್ತ್ರವಾಗಿ ಬಳಸಿರುವುದು ಪಾಕ್ ಗುಪ್ತಚರ ಸಂಸ್ಥೆ ಎಂಎಸ್‌ಐಗೆ ನಡುಕ ಹುಟ್ಟಿಸಿದೆ. 24 ವರ್ಷದ ಆಸಿಫಾ ಮೆಂಗಲ್ ಎಂಬ ಮಹಿಳಾ ಬಾಂಬರ್, ನೋಷ್ಕಿಯಲ್ಲಿರುವ ಐಎಸ್‌ಐ ಕಚೇರಿಯ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದಾಳೆ.

ಈ ಒಂದೇ ದಾಳಿಯಲ್ಲಿ 17 ಪಾಕ್ ಯೋಧರು ಸೇರಿದಂತೆ ಒಟ್ಟು 57 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ದಾಳಿ ನಡೆಸಿದ ಇಬ್ಬರು ಮಹಿಳಾ ಬಾಂಬರ್‌ಗಳ ಫೋಟೋವನ್ನು ಬಿಎಲ್‌ಎ ಬಿಡುಗಡೆ ಮಾಡಿ ಸವಾಲು ಹಾಕಿದೆ. ಖಾರನ್, ಮಸ್ತುಂಗ್, ತುಂಪ್ ಮತ್ತು ಪಸ್ನಿ ಸೇರಿದಂತೆ ಬಲೂಚಿಸ್ತಾನದ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ನೂರಾರು ಸೈನಿಕರ ಹತ್ಯೆಯ ಜೊತೆಗೆ, ಹಲವು ಪಾಕ್ ಯೋಧರನ್ನು ಬಿಎಲ್‌ಎ ಸೆರೆಹಿಡಿದಿದೆ. ನೋಷ್ಕಿಯ ಡೆಪ್ಯುಟಿ ಕಮಿಷನರ್ ಮತ್ತು ಅಸಿಸ್ಟೆಂಟ್ ಕಮಿಷನರ್ ಅವರನ್ನು ಅಪಹರಿಸಿ, ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಸಂಘಟನೆ ಹೇಳಿಕೊಂಡಿದೆ. ಇತ್ತ ಪಾಕಿಸ್ತಾನ ಸೇನೆಯು ತನ್ನ ಸೈನಿಕರ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದ್ದು, ಪ್ರತಿದಾಳಿಯಲ್ಲಿ 133 ಬಂಡುಕೋರರನ್ನು ಕೊಂದಿರುವುದಾಗಿ ಹೇಳಿಕೊಂಡಿದೆ.

ಏನಿದು ಬಿಎಲ್‌ಎ ಹೋರಾಟ?
ಬಲೂಚಿಸ್ತಾನದ ನೈಸರ್ಗಿಕ ಸಂಪನ್ಮೂಲಗಳನ್ನು ಪಾಕಿಸ್ತಾನ ಸರ್ಕಾರ ಲೂಟಿ ಮಾಡುತ್ತಿದೆ ಮತ್ತು ಸ್ಥಳೀಯರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂಬುದು ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (BLA) ಆರೋಪ. ಈ ಪ್ರಾಂತ್ಯದ ಸ್ವಾತಂತ್ರ್ಯಕ್ಕಾಗಿ ದಶಕಗಳಿಂದ ಹೋರಾಡುತ್ತಿರುವ ಈ ಗುಂಪನ್ನು ಪಾಕಿಸ್ತಾನ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ.

ಪ್ರಸ್ತುತ ಬಲೂಚಿಸ್ತಾನದ ಪ್ರಮುಖ ನಗರಗಳಲ್ಲಿ ಪಾಕ್ ಸೇನೆ ಮತ್ತು ಬಂಡುಕೋರರ ನಡುವೆ ಯುದ್ಧ ಸದೃಶ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಕ್ ಸರ್ಕಾರವು ಈ ಭಾರಿ ನಷ್ಟದ ಹಿನ್ನೆಲೆಯಲ್ಲಿ ಮೌನಕ್ಕೆ ಶರಣಾಗಿದ್ದು, ಪರಿಸ್ಥಿತಿ ಕೈಮೀರುತ್ತಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments