Top Newsಕ್ರಿಕೆಟ್

Hardik Pandya: ಮುಂಬೈ ಇಲ್ಲದಿದ್ರೆ ವಿಶ್ವ ಕ್ರಿಕೆಟ್‌ನಲ್ಲಿ ನಾನಿಲ್ಲ: ಪಾಂಡ್ಯ

ಐಪಿಎಲ್-2024 ಸಂಭ್ರಮ ಶುರುವಾಗಲು ಕೆಲವೇ ದಿನ ಬಾಕಿ.. ಈ ಬಾರಿ ರೋಹಿತ್ ಶರ್ಮಾ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ಸಾರಥ್ಯವನ್ನು ಹಾರ್ದಿಕ್ ಪಾಂಡ್ಯ ವಹಿಸಲಿದ್ದಾರೆ.

ಐಪಿಎಲ್ ಟೂರ್ನಿ ಶುರುವಾಗುವ ಮುನ್ನ ಕ್ರೀಡಾ ಚಾನಲ್ ಒಂದರ ಜೊತೆ ಮಾತನಾಡಿದ ಹಾರ್ದಿಕ್ ಪಾಂಡ್ಯ, 2015ರ ಐಪಿಎಲ್‌ನಲ್ಲಿ ಮುಂಬೈ ತಂಡಕ್ಕೆ ಆಡುವ ಮೂಲಕವೇ ತನ್ನ ಪಯಣ ಶುರುವಾಯಿತು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

2015.. ನನ್ನ ಜೀವನದಲ್ಲಿ ವಿಶೇಷವಾದ ವರ್ಷ.. ಅಲ್ಲಿಂದಲೇ ನನ್ನ ಪಯಣ ಶುರುವಾಯ್ತು. ಎಷ್ಟೋ ಆಸೆಗಳೊಂದಿಗೆ ಗುಜರಾತ್‌ನಿಂದ ಬಂದ ಒಬ್ಬ ಹುಡುಗನ ಕನಸು ಆ ಸಮಯದಲ್ಲಿ ನನಸಾಯ್ತು.

ಮುಂಬೈ ಇಂಡಿಯನ್ಸ್ ಇಲ್ಲ ಎಂದಿದ್ರೆ ವಿಶ್ವ ಕ್ರಿಕೆಟ್‌ನಲ್ಲಿ ನಾನು ಈ ಮಟ್ಟಕ್ಕೆ ಸೇರಿಕೊಳ್ಳುತ್ತಿರಲಿಲ್ಲ.  ಇಡೀ ಸೀಜನ್‌ನಲ್ಲಿ ಮುಂಬೈ ತಂಡಕ್ಕೆ ನನ್ನ ಕೈಲಾದ ಸಹಕಾರ ನೀಡಿದೆ.

ಅದೇ ಲೀಗ್‌ನಲ್ಲಿ ಎರಡು ಮ್ಯಾನ್ ಆಫ್ ದಿ ಮ್ಯಾಚ್ ಪಡೆದಿದ್ದನ್ನು ಎಂದಿಗೂ ಮರೆಯಲ್ಲ

ಎಂದು ಹಾರ್ದಿಕ್ ಪಾಂಡ್ಯ ಹೇಳಿಕೊಂಡಿದ್ದಾರೆ.

ಈ ಮೂಲಕ ತಾನು ಮುಂಬೈ ಇಂಡಿಯನ್ಸ್ ಟೀಂಗೆ ಮರಳಿದ್ದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ

 

Comments (0)

Your email address will not be published. Required fields are marked *

Back to top button