Top Newsಕ್ರಿಕೆಟ್

IPL 2024: ಅಪಘಾತದಲ್ಲಿ 3.60 ಕೋಟಿ ಮೌಲ್ಯದ ಯುವ ಆಟಗಾರನಿಗೆ ಗಾಯ

ಐಪಿಎಲ್ ಮಿನಿ ಬಿಡ್ಡಿಂಗ್‌ನಲ್ಲಿ 3.60 ಕೋಟಿ ರೂಪಾಯಿಗೆ ಬಿಕರಿ ಆಗಿ ಎಲ್ಲರನ್ನು ಆಕರ್ಷಿಸಿದ್ದ ಗುಜರಾತ್ ಟೈಟಾನ್ಸ್ ಆಟಗಾರ ರಾಬಿನ್ ಮಿಂಜ್ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಬೈಕ್‌ನಲ್ಲಿ ತೆರಳುವಾಗ ಮತ್ತೊಂದು ವಾಹನ ಡಿಕ್ಕಿ ಹೊಡೆದು ರಾಬಿನ್ ಮಿಂಜ್ ಗಾಯಗೊಂಡಿದ್ದಾರೆ ಎಂದು ರಾಬಿನ್ ತಂದೆ ಫ್ರಾನ್ಸಿಸ್ ಜೆವಿಯರ್ ಮಿಂಜ್ ತಿಳಿಸಿದ್ದಾರೆ.

ಅದೃಷ್ಟವಶಾತ್ ತೀವ್ರ ಸ್ವರೂಪದ ಗಾಯ ಉಂಟಾಗಿಲ್ಲ. ಸದ್ಯ ವೈದ್ಯರ ನಿಗಾದಲ್ಲಿ ರಾಬಿನ್ ಇದ್ದಾರೆ ಎಂದು ಫ್ರಾನ್ಸಿಸ್ ಮಾಹಿತಿ ನೀಡಿದ್ದಾರೆ.

ಮತ್ತೊಂದು ವಾಹನ ಡಿಕ್ಕಿ ಹೊಡೆದ ತೀವ್ರತೆಗೆ ರಾಬಿನ್ ಮಿಂಜ್ ಬೈಕ್ ಧ್ವಂಸವಾಗಿದೆ.ರಾಬಿನ್ ಮಿಂಜ್ ಮೊಣಕಾಲಿಗೆ ಗಾಯವಾಗಿದೆ.

ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ರಾಬಿನ್ ಮಿಂಜ್ ಐಪಿಎಲ್‌ನಲ್ಲಿ ಆಡುತ್ತಿರುವ ಮೊದಲ ಬುಡಕಟ್ಟು ಕ್ರಿಕೆಟರ್ ಎಂಬ ಗರಿಮೆಗೆ ಪಾತ್ರರಾಗಿದ್ದಾರೆ.

ಎಡಗೈ ಬ್ಯಾಟರ್ ಕಮ್ ವಿಕೆಟ್ ಕೀಪರ್ ಆಗಿರುವ ಮಿಂಜ್ ದೇಶಿಯ ಕ್ರಿಕೆಟ್‌ನಲ್ಲಿ ಬೀಡುಬೀಸಾದ ಆಟದಿಂದ ಎಲ್ಲರ ಗಮನ ಸೆಳೆದಿದ್ರು.

ಇದನ್ನು ಓದಿ

https://freedomtvlive.com/2024/02/29/shubman-gill-surprises-gujarat-titans-team-mate-robin-minzs-father-at-the-airport/

Comments (0)

Your email address will not be published. Required fields are marked *

Back to top button