Wednesday, June 25, 2025
28.6 C
Bengaluru
Google search engine
LIVE
ಮನೆ#Exclusive NewsTop NewsShubman Gill: ಸೆಕ್ಯುರಿಟಿ ಗಾರ್ಡ್ ಆಗಿರುವ ಗುಜರಾತ್ ಪ್ಲೇಯರ್ ತಂದೆ.. ಬ್ಯಾಟರ್ ಗಿಲ್ ಸರ್​ಪ್ರೈಸ್​!

Shubman Gill: ಸೆಕ್ಯುರಿಟಿ ಗಾರ್ಡ್ ಆಗಿರುವ ಗುಜರಾತ್ ಪ್ಲೇಯರ್ ತಂದೆ.. ಬ್ಯಾಟರ್ ಗಿಲ್ ಸರ್​ಪ್ರೈಸ್​!

ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ಶುಭ್​ಮನ್ ಗಿಲ್(Shubman Gill).. ಗುಜರಾತ್​ ಟೈಟಾನ್ಸ್ (Gujarat Totans)ತಂಡದ ಯುವ ಆಟಗಾರರೊಬ್ಬರ ತಂದೆಗೆ ಸರ್​ಪ್ರೈಸ್ ನೀಡಿದ್ದಾರೆ. ಏರ್​ಪೋರ್ಟ್​ನಲ್ಲಿ ಸೆಕ್ಯೂರಿಟಿ ಗಾರ್ಡ್ (Security Guard) ಆಗಿ ಕೆಲಸ ಮಾಡುತ್ತಿರುವ ಅವರನ್ನು ಆತ್ಮೀಯವಾಗಿ ಮಾತನಾಡಿಸಿ ಕುಶಲ ವಿಚಾರಿಸಿದ್ದಾರೆ.

ದಕ್ಕೆ ಸಂಬಂಧಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಯಾರು ಆ ಪ್ಲೇಯರ್? ಆವರ ತಂದೆ ಯಾರು?

ರಾಂಚಿ ಟೆಸ್ಟ್ ಪಂದ್ಯದ ಗೆಲುವಿನಲ್ಲಿ ಒನ್​ಡೌನ್ ಬ್ಯಾಟರ್ ಶುಭ್​ಮನ್ ಗಿಲ್ ಮಹತ್ವದ ಪಾತ್ರ ವಹಿಸಿದ್ರು. ಎರಡನೇ ಇನ್ನಿಂಗ್ಸ್​ನಲ್ಲಿ ಯುವ ವಿಕೆಟ್ ಕೀಪರ್ ಧ್ರುವ್ ಜುರೇಲ್ ಜೊತೆಗೂಡಿ ಟೀಂ ಇಂಡಿಯಾವನ್ನು ವಿಜಯ ತೀರಕ್ಕೆ ಸೇರಿಸಿದ್ರು ಈ ಪಂಜಾಬಿ ಬ್ಯಾಟರ್.

ರಾಂಚಿ ಟೆಸ್ಟ್ ಮುಗಿಸಿಕೊಂಡು ಅಲ್ಲಿನ ಬಿರ್ಸಾ ಮುಂಡಾ ಏರ್​ಪೋರ್ಟ್​ಗೆ ಬಂದ ಶುಭ್​ಮನ್ ಗಿಲ್ ಓರ್ವ ಸೆಕ್ಯೂರಿಟಿ ಗಾರ್ಡ್ ಅನ್ನು ಮಾತನಾಡಿಸಿದರು. ಅವರ ಹೆಸರು ಫ್ರಾನ್ಸಿಸ್ ಜೇವಿಯರ್ ಮಿಂಜ್..

20 ಲಕ್ಷ ಮೂಲ ಬೆಲೆ.. ಸೇಲ್ ಆಗಿದ್ದು 3.6 ಕೋಟಿಗೆ..

ಇತ್ತೀಚಿಗೆ ನಡೆದ ಐಪಿಎಲ್​ ಮಿನಿ ಬಿಡ್ಡಿಂಗ್​ನಲ್ಲಿ (IPL 2024)ಗುಜರಾತ್ ಟೈಟಾನ್ಸ್ ಫ್ರಾಂಚೈಸಿ 3.6 ಕೋಟಿ ಕೊಟ್ಟು ಖರೀದಿಸಿದ ಯುವ ಆಟಗಾರ ರಾಬಿನ್​ ಮಿಂಜ್​​ (Robin Minz)ಅವರ ತಂದೆಯೇ ಈ ಸೆಕ್ಯೂರಿಟಿ ಗಾರ್ಡ್ ಫ್ರಾನ್ಸಿಸ್ ಜೇವಿಯರ್ ಮಿಂಜ್..

ಐಪಿಎಲ್​ ಚರಿತ್ರೆಯಲ್ಲಿಯೇ ಸೇಲ್ ಆದ ಮೊದಲ ಬುಡಕಟ್ಟು ಸಮುದಾಯದ ಕ್ರಿಕೆಟರ್ ಆಗಿ ರಾಬಿನ್ ಮಿಂಜ್ ದಾಖಲೆ ಬರೆದಿದ್ರು.

ದೇಶಿಯ ಟೂರ್ನಿಗಳಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಮಿಂಚಿದ ರಾಬಿನ್ ಮಿಂಜ್​ ಐಪಿಎಲ್ ಮಿನಿ ಬಿಡ್ಡಿಂಗ್​ನಲ್ಲಿ 20 ಲಕ್ಷ ಮೂಲ ಬೆಲೆಗೆ ಪಾಲ್ಗೊಂಡಿದ್ರು. ಆದರೆ, ಗುಜರಾತ್ ಟೈಟಾನ್ಸ್ ಫ್ರಾಂಚೈಸಿ 3.6 ಕೋಟಿ ಕೊಟ್ಟು ರಾಬಿನ್ ಮಿಂಜ್​ರನ್ನು ಖರೀದಿಸಿತ್ತು.

ರಾಬಿನ್ ಮಿಂಜ್ ತಂದೆ ಈ ಹಿಂದೆ ಸೇನೆಯಲ್ಲಿ ಕೆಲಸ ಮಾಡಿದ್ದರು ಸದ್ಯ ಬಿರ್ಸಾ ಮುಂಡಾ ಏರ್​ಪೋರ್ಟ್​ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ.

ಇತ್ತೀಚಿಗೆ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್​ಗೆ ವಾಪಸ್ ಆದ ಹಿನ್ನೆಲೆಯಲ್ಲಿ ಗುಜರಾತ್ ಟೈಟಾನ್ಸ್ ನಾಯಕರಾಗಿ ಶುಭ್​ಮನ್ ಗಿಲ್​ ನೇಮಕಗೊಂಡಿದ್ದರು.

 

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments