
ರಾಂಚಿಯಲ್ಲಿ ಇಂಗ್ಲೆಂಡ್ ವಿರುದ್ಧ ಆರಮಭವಾದ ನಾಲ್ಕನೇ ಟೆಸ್ಟ್ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಟೀಂ ಇಂಡಿಯಾ ಪೇಸರ್ ಆಕಾಶ್ ದೀಪ್ ಅದ್ಭುತವಾದ ಬೌಲಿಂಗ್ ಪ್ರದರ್ಶನ ನೀಡ್ತಿದ್ದಾರೆ. ಪೇಸ್ ಬೌಲಿಂಗ್ ಮೂಲಕ ಇಂಗ್ಲೆಂಡ್ ಬ್ಯಾಟರ್ಗಳನ್ನು ಪರದಾಡುವಂತೆ ಮಾಡುತ್ತಿದ್ದಾರೆ.
ಆದರೆ ಮೊದಲ ಪಂದ್ಯದಲ್ಲೇ ಆಕಾಶ್ ದೀಪ್ರನ್ನು ದುರಾದೃಷ್ಟ ಬೆಂಬಿಡದೇ ಕಾಡಿದೆ. ಮೊದಲ ವಿಕೆಟ್ ಪಡೆಯುವ ಅವಕಾಶವನ್ನು ಕೂದಲೆಳೆ ಅಂತರದಲ್ಲಿ ಕಳೆದುಕೊಂಡಿದ್ದಾರೆ.
ನಡೆದಿದ್ದೇನು?
ಮೊದಲ ಇನ್ನಿಂಗ್ಸ್ನ ನಾಲ್ಕನೇ ಓವರ್ ಬೌಲ್ ಮಾಡಿದ ಆಕಾಶ್ ಅದ್ಭುತವಾದ ಇನ್ ಸ್ವಿಂಗರ್ ಮೂಲಕ ಐದನೇ ಎಸೆತವನ್ನು ಕ್ರಾಲೆಗೆ ಹಾಕಿದರು. ಆಕಾಶ್ ಎಸೆತಕ್ಕೆ ಕ್ರಾಲೆ ಬಳಿ ಉತ್ತರವೇ ಇರಲಿಲ್ಲ. ಚೆಂಡನ್ನು ಕ್ರಾಲೆ ತಡೆಯುವ ತಡೆಯುವ ಹೊತ್ತಿಗೆ ಅದು ಅಫ್ ಸ್ಟಂಪ್ ಅನ್ನು ಎಗರಿಸಿತ್ತು. ಆಕಾಶ್ ಸಂಭ್ರಮಕ್ಕೆ ಎಣೆಯೇ ಇರಲಿಲ್ಲ.
ಆದರೆ, ಅಲ್ಲಿಯೇ ಶಾಕಿಂಗ್ ಟ್ವಿಸ್ಟ್ ಒಂದು ಆಕಾಶ್ಗೆ ಕಾದಿತ್ತು. ಚೆಂಡನ್ನು ಎಸೆಯುವ ಹಂತದಲ್ಲಿ ಆಕಾಶ್ ಫ್ರಂಟ್ ಲೈನ್ ದಾಟಿದ್ದರು. ಹೀಗಾಗಿ ಆನ್ ಫೀಲ್ಡ್ ಅಂಪೈರ್ ರಾಡ್ ಟಕ್ಕರ್ ಇದನ್ನು ನೋ ಬಾಲ್ ಎಂದು ಪ್ರಕಟಿಸಿದರು. ಇದರಿಂದ ಆಕಾಶ್ ನಿರಾಸೆಗೊಂಡರು.
https://twitter.com/i/status/1760888001192976624
ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.. ದುರಾದೃಷ್ಟ ಅಂದ್ರೆ ನಿಂದೆ ಭಯ್ಯಾ ಎಂದು ನೆಟ್ಟಿಗರು ಕಾಮೆಂಟಿಸತೊಡಗಿದ್ದಾರೆ




