ಜಿಲ್ಲೆಧರ್ಮ

ಅಬ್ಬರ, ಆರ್ಭಟಕ್ಕೆ ಗುಳಿಗನಿಗೆ ಗುಳಿಗನೇ ಸಾಟಿ ಆ ನೆಲದಲ್ಲಿ ಅಬ್ಬರಿಸಿದ ನವಗುಳಿಗ ದೈವಗಳು!

ಮಂಗಳೂರು: ಇದು ತುಳುನಾಡಿನ ದೈವಾರಾದನೆಯ ಇತಿಹಾಸದಲ್ಲೇ ದುರ್ಗಾಪರಮೇಶ್ವರಿ ದೇವಿಯ ದೂತನಾಗಿ ನವಗುಳಿಗ ದೈವಗಳಿರುವ ಏಕೈಕ ಸ್ಥಳ ಬರ್ಕಜೆ ಇಲ್ಲಿ 9 ನೇ ವಾರ್ಷಿಕ ಜಾತ್ರ ಮಹೋತ್ಸವ ನಡೆದಿದ್ದು ಒಂದೇ ಬಾರಿ 18 ಗುಳಿಗ ದೈವದ ಗಗ್ಗರ ಸೇವೆ ನಡೆದಿದೆ. ಪ್ರತಿ ವರ್ಷದಂತೆ ಒಂಬತ್ತು ಗುಳಿಗ ದೈವಗಳಿಗೆ ಏಕಕಾಲದಲ್ಲಿ ಗಗ್ಗರ ಸೇವೆ ನಡೆದರೆ ಈ ಬಾರಿ ಮಾತ್ರ ಭಕ್ತರ ಹರಕೆ ಸೇವಾ ರೂಪದಲ್ಲಿ 18 ಗುಳಿಗ ದೈವಗಳಿಗೆ ಗಗ್ಗರ ಸೇವೆ ನಡೆದಿದ್ದು ವಿಶೇಷ ಅಗಿತ್ತು.

ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಬರ್ಕಜೆ ದುರ್ಗಾಪರಮೇಶ್ವರಿ ಮತ್ತು ನವ ಗುಳಿಗ ಕ್ಷೇತ್ರದಲ್ಲಿ ಈ ಬಾರಿ ವಿಶೇಷ ಎಂಬಂತೆ 18 ಗುಳಿಗ ದೈವದ ಗಗ್ಗರ ಸೇವೆ ನಡೆದು, ನೆರೆದಿದ್ದ ದೈರಾಧಕರನ್ನು ರೋಮಾಂಚನ ಗೊಳಿಸಿತ್ತು.ಅಲ್ಲದೆ ಶಿವಧೂತ ಗುಳಿಗ ದೈವಗಳ ಅಬ್ಬರ ಕೂಡಾ ಜೋರಾಗಿತ್ತು.

ಬರ್ಕಜೆ ದುರ್ಗಾಪರಮೇಶ್ವರಿ ಮತ್ತು ನವ ಗುಳಿಗ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಒಂಬತ್ತು ಗುಳಿಗ ದೈವದ ನರ್ತನ ಸೇವೆ ನಡೆಯುತ್ತಿತ್ತು.‌ ಆದ್ರೆ ಈ ಬಾರಿ ಸಂಪ್ರದಾಯದಂತೆ ಒಂಬತ್ತು ಹಾಗೂ ಸೇವೆಯಾಗಿ 9 . ಹೀಗೆ ಒಟ್ಟು 18 ಗುಳಿಗ ದೈವದ ನರ್ತನ ಸೇವೆ ನಡೆದು ತುಳುನಾಡಿನ ದೈವಾರಾದನೆಯ ಇತಿಹಾಸದಲ್ಲೇ ಮೊದಲು ಎಂಬಂತಾಗಿದೆ.

ಇನ್ನೂ, ಪ್ರತ್ಯೇಕವಾಗಿ ನಡೆದ 18 ಗುಳಿಗ ದೈವದ ವಿಶೇಷ ಗಗ್ಗರ ಸೇವೆಯನ್ನು ಕಣ್ತುಂಬಿಕೊಳ್ಳುದಕ್ಕೆ ಮುಂಬೈ ಬೆಂಗಳೂರು ಸೇರಿದಂತೆ ಕರಾವಳಿಯ ಸಾವಿರಾರು ದೈವಾರಾಕರು ಸೇರಿದ್ದರು. ಗುಳಿಗ ದೈವಗಳ ಗಗ್ಗರ ಸೇವೆ ಕಣ್ತುಂಬಿಕೊಂಡರು..

ಒಟ್ಣಿಲ್ಲಿ, ದೈವಾರಾದನೆ ಎಂಬುದು ಕರಾವಳಿ ಅಸ್ಮಿತೆ. ಜನರ ನಂಬಿಕೆ. ಇತಿಹಾಸದಲ್ಲೆ ಮೊದಲಾಗಿ ನಡೆದ 18 ಗುಳಿಗ ದೈವದ ನರ್ತನ ಸೇವೆ ಕಂಡು ಭಕ್ತರು ಪುನೀತರಾದರು.

Comments (0)

Your email address will not be published. Required fields are marked *

Back to top button