ದೇಶ/ವಿದೇಶ

ಟಿಬೆಟ್​ನಲ್ಲಿ ಪ್ರಬಲ ಭೂಕಂಪ – 18 ಮಂದಿ ಸಾವು, 300ಕ್ಕೂ ಹೆಚ್ಚು ಮನೆ ಕುಸಿತ!

Powerful earthquake in Tibet – 18 dead, over 300 houses collapsed!

ಬೀಜಿಂಗ್ : ನೇಪಾಳ ಮತ್ತು ಚೀನಾ ಗಡಿ ಭಾಗದಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಘಟನೆಯಲ್ಲಿ 18 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಮನೆಗಳು ಸಂಪೂರ್ಣವಾಗಿ ಕುಸಿದುಬಿದ್ದಿವೆ.

ಗಡಿ ಭಾಗದಲ್ಲಿ ಭೂಮಿಯ ಆಳದಲ್ಲಿ ಸಂಭವಿಸಿದ ಭಾರೀ ಸ್ಫೋಟದ ತೀವ್ರತೆಯಿಂದಾಗಿ, ಕೇವಲ 45 ನಿಮಿಷಗಳ ಅಂತರದಲ್ಲಿ ಸತತವಾಗಿ ಎರಡು ಬಾರಿ ಭೂಮಿ ಕಂಪಿಸಿದೆ. ಭೂಕಂಪದ ನಡುಕವು ಕೆಲವೇ ಸೆಕೆಂಡುಗಳಲ್ಲಾದರೂ, ಅದು ಸೃಷ್ಟಿಸಿದ ನಡುಕ ಜನರನ್ನು ಬೆಚ್ಚಿಬೀಳಿಸಿದೆ.

ಭೂಮಿ ಕಂಪಿಸುತ್ತಿದ್ದಂತೆ ಹೆದರಿಹೋದ ನಿವಾಸಿಗಳು ಪ್ರಾಣಭಯದಿಂದ ಮನೆಯಿಂದ ಹೊರಗೆ ಓಡಿಹೋಗಿದ್ದಾರೆ. ಸದ್ಯ ಭೂಕಂಪ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ಪರಿಹಾರ ಕಾರ್ಯಗಳಿಗೆ 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಾದೇಶಿಕ ಅಗ್ನಿಶಾಮಕ ಮತ್ತು ರಕ್ಷಣಾ ಪಡೆಗಳ 347 ಸಿಬ್ಬಂದಿಯೂ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಭೂಕಂಪದಿಂದ ಮನೆ ಕಳೆದುಕೊಂಡಿರುವ ಜನರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲು ಡೇರೆಗಳನ್ನು ಸ್ಥಾಪಿಸಲಾಗುತ್ತಿದೆ. ರಕ್ಷಣಾ ಕಾರ್ಯಕರ್ತರು ಹಾನಿಗೊಳಗಾದ ಕಟ್ಟಡಗಳನ್ನು ಪರಿಶೀಲಿಸುತ್ತಿದ್ದು, ಗಾಯಾಳುಗಳನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುತ್ತಿದ್ದಾರೆ.

Comments (0)

Your email address will not be published. Required fields are marked *

Back to top button
Verified by MonsterInsights