ದೇಶ/ವಿದೇಶ

ಕುವೈತ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ –  ಐವರು ಭಾರತೀಯ ನಾವಿಕರ ರಕ್ಷಣೆ!

Missile attack on Kuwaiti oil tanker – Five Indian sailors rescued!

ಹಾರ್ಮೂಸ್ ಜಲಸಂಧಿಯಲ್ಲಿ ಕುವೈತ್ ಧ್ವಜ ಹೊತ್ತಿದ್ದ ಕಚ್ಚಾ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಈ ಘಟನೆಯಲ್ಲಿ ಎಂಟಿ ಕಾಜಿಮಾ III (MT Kazimah III) ಹೆಸರಿನ ತೈಲ ಟ್ಯಾಂಕರ್ ನೇರವಾಗಿ ಗುರಿಯಾಗಿದ್ದು, ಹಡಗಿನಲ್ಲಿದ್ದ ಐವರು ಭಾರತೀಯ ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ.

ಓಮನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದು, ದಾಳಿಗೊಳಗಾದ ಹಡಗಿನಲ್ಲಿದ್ದ ಎಲ್ಲ ಭಾರತೀಯ ಪ್ರಜೆಗಳು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿದೆ.

ಕುವೈತ್ ಧ್ವಜದ ಅಡಿಯಲ್ಲಿ ಕಚ್ಚಾ ತೈಲವನ್ನು ಸಾಗಿಸುತ್ತಿದ್ದ ಟ್ಯಾಂಕರ್ ಮೇಲೆ ಇದ್ದಕ್ಕಿದ್ದಂತೆ ದಾಳಿ ನಡೆದಿದೆ. ತೈಲ ಟ್ಯಾಂಕರ್ ಮೇಲೆ ನಡೆದ ಈ ಅಟ್ಯಾಕ್‌ನಿಂದಾಗಿ ಪ್ರಾದೇಶಿಕ ಸಮುದ್ರ ಮಾರ್ಗಗಳಲ್ಲಿ ತೈಲ ಸಾಗಾಟದ ಭದ್ರತೆಯ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ.

ಹಾರ್ಮೂಸ್ ಜಲಸಂಧಿಯು ವಿಶ್ವದ ಪ್ರಮುಖ ತೈಲ ಸಾಗಾಟ ಮಾರ್ಗಗಳಲ್ಲಿ ಒಂದಾಗಿದ್ದು, ಇಂತಹ ದಾಳಿಗಳು ವ್ಯಾಪಾರ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ಭಾರತೀಯ ರಾಯಭಾರ ಕಚೇರಿಯ ತ್ವರಿತ ಕ್ರಮದಿಂದಾಗಿ ಭಾರತೀಯ ನಾವಿಕರು ಅಪಾಯದಿಂದ ಪಾರಾಗಿದ್ದಾರೆ.

Comments (0)

Your email address will not be published. Required fields are marked *

Back to top button
Verified by MonsterInsights