ದೇಶ/ವಿದೇಶ

ಪ್ರಬಲ ಭೂಕಂಪಕ್ಕೆ ನಲುಗಿದ ಕೊಲಂಬಿಯಾ – ಸಾವಿನ ಸಂಖ್ಯೆ 132ಕ್ಕೆ ಏರಿಕೆ!

Colombia hit by powerful earthquake - death toll rises to 132!

ಬೊಗೋಟಾ : ಪಶ್ಚಿಮ ಕೊಲಂಬಿಯಾದಲ್ಲಿ ಸಂಭವಿಸಿದ 7.4 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ ಸಾವಿನ ಸಂಖ್ಯೆ 132ಕ್ಕೆ ಏರಿಕೆಯಾಗಿದೆ.

ಈ ಪ್ರಕೃತಿ ವಿಕೋಪವು ಭಾರೀ ಪ್ರಮಾಣದ ಹಾನಿಯನ್ನುಂಟು ಮಾಡಿದೆ. ಇದುವರೆಗೆ 132 ಜನರು ಪ್ರಾಣ ಕಳೆದುಕೊಂಡಿದ್ದು, 570ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪೆರೇರಾ ನಗರದಲ್ಲಿ ಅತ್ಯಂತ ತೀವ್ರವಾದ ಹಾನಿ ಸಂಭವಿಸಿದ್ದು, ಈ ನಗರವೊಂದರಲ್ಲೇ 60 ಜನರು ಸಾವನ್ನಪ್ಪಿದ್ದಾರೆ.

ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಮುಂದುವರಿದಿದ್ದು, ಅವಶೇಷಗಳ ತೆರವು ಕಾರ್ಯಾಚರಣೆ ವೇಳೆ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಭೂಕಂಪದ ತೀವ್ರತೆಗೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ-ಪಾಸ್ತಿ ಹಾನಿಯಾಗಿದೆ. 1,500ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, ಅನೇಕ ವಸತಿ ಕಟ್ಟಡಗಳು ಮತ್ತು ಕಚೇರಿಗಳು ಕುಸಿದುಬಿದ್ದಿವೆ. 18 ಆರೋಗ್ಯ ಕೇಂದ್ರಗಳು ಹಾಗೂ 52 ಶಾಲೆಗಳಿಗೂ ತೀವ್ರ ಹಾನಿಯಾಗಿದೆ.

ಭೂಕಂಪದ ತೀವ್ರತೆಯ ಕಂಪನಗಳು ಕೊಲಂಬಿಯಾ ಮಾತ್ರವಲ್ಲದೆ, ನೆರೆಯ ಈಕ್ವೆಡಾರ್‌ ದೇಶದ ಜನರಿಗೂ ಅನುಭವವಾಗಿದೆ.

Comments (0)

Your email address will not be published. Required fields are marked *

Back to top button