
ಬೆಂಗಳೂರು : ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್ನ ಗುಂಪು ಹಂತ ಮುಕ್ತಾಯದ ಹಂತಕ್ಕೆ ಬಂದಿದೆ. ಆ ಬಳಿಕ ಜನವರಿ 30 ರಿಂದ ಸೂಪರ್ ಸಿಕ್ಸ್ ಹಂತ ಆರಂಭವಾಗಲಿದೆ. ಈ ಸೂಪರ್ ಸಿಕ್ಸ್ ಹಂತದಲ್ಲಿ 12 ತಂಡಗಳು ಸ್ಥಾನ ಪಡೆಯಲ್ಲಿದ್ದು, ಈ ಹಂತಕ್ಕೆ ಈಗಾಗಲೇ 9 ತಂಡಗಳು ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್ನ ಗುಂಪು ಹಂತ ಮುಕ್ತಾಯದ ಹಂತಕ್ಕೆ ಬಂದಿದೆ. ಆ ಬಳಿಕ ಜನವರಿ 30 ರಿಂದ ಸೂಪರ್ ಸಿಕ್ಸ್ ಹಂತ ಆರಂಭವಾಗಲಿದೆ. ಈ ಸೂಪರ್ ಸಿಕ್ಸ್ ಹಂತದಲ್ಲಿ 12 ತಂಡಗಳು ಸ್ಥಾನ ಪಡೆಯಲ್ಲಿದ್ದು, ಈ ಹಂತಕ್ಕೆ ಈಗಾಗಲೇ 9 ತಂಡಗಳು ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಉಳಿದ ಮೂರು ತಂಡಗಳು ಯಾವುವು ಎಂಬುದರ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಈ ಬಾರಿಯ ವಿಶ್ವಕಪ್ನಲ್ಲಿ 16 ತಂಡಗಳು ಭಾಗವಹಿಸುತ್ತಿವೆ. ಈ 16 ತಂಡಗಳನ್ನು ತಲಾ 4 ತಂಡಗಲಾಗಿ 4 ಗುಂಪುಗಳಲ್ಲಿ ಇರಿಸಲಾಗಿದೆ. ಪ್ರತಿ ಗುಂಪಿನಿಂದ ಮೂರು ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ.
ಅರ್ಹತೆ ಪಡೆದ 9 ತಂಡಗಳು
ಜನವರಿ 30ರಿಂದ ಆರಂಭವಾಗಲಿರುವ ಸೂಪರ್ 6 ಸುತ್ತಿಗೆ ಟೀಂ ಇಂಡಿಯಾ ಸೇರಿದಂತೆ 9 ತಂಡಗಳು ತಮ್ಮ ಸ್ಥಾನವನ್ನು ಖಚಿತಪಡಿಸಿವೆ. ಜನವರಿ 27ರ ಬೆಳಗ್ಗೆ ಐಸಿಸಿ ಈ ಮಾಹಿತಿಯನ್ನು ನೀಡಿದೆ. ಎ ಗುಂಪಿನಲ್ಲಿರುವ ಟೀಂ ಇಂಡಿಯಾ ಜೊತೆಗೆ ಇದುವರೆಗೆ ಬಾಂಗ್ಲಾದೇಶ ತಂಡ ಮಾತ್ರ ಮುಂದಿನ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಇನ್ನು ಈ ಗುಂಪಿನಿಂದ ಆಯ್ಕೆಯಾಗುವ ಮೂರನೇ ತಂಡ ಯಾವುದು ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ. ಆ ಮೂರನೇ ತಂಡದ ಸ್ಥಾನಕ್ಕಾಗಿ ಐರ್ಲೆಂಡ್ ಹಾಗೂ ಅಮೆರಿಕ ನಡುವೆ ಪೈಪೋಟಿ ಏರ್ಪಟ್ಟಿದೆ. ಇನ್ನು ಬಿ ಗುಂಪಿನಿಂದ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದರೆ, ಸಿ ಗುಂಪಿನಿಂದ ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಡಿ ಗುಂಪಿನಿಂದ ಪಾಕಿಸ್ತಾನ, ನೇಪಾಳ ಮತ್ತು ನ್ಯೂಜಿಲೆಂಡ್ ಮುಂದಿನ ಸುತ್ತಿನಲ್ಲಿ ಸ್ಥಾನ ಪಡೆದಿವೆ.




