
ಬೆಂಗಳೂರು: ನನಗೆ ಯಾವುದೇ ನೋವು ದುಃಖಗಳಿಲ್ಲ. ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಉಪಹಾರ ಸಭೆಯಲ್ಲಿ ಹೇಳಿದ್ದಾರೆ. ಪ್ರಮುಖ ಮಂತ್ರಿಗಳ ಜೊತೆಗಿನ ಉಪಹಾರ ಸಭೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನಿರ್ಧಾರ ಅಂತಿಮ. ಅವರು ಹೇಳುವುದನ್ನು ಪಾಲನೆ ಮಾಡುವುದು ನನ್ನ ಕರ್ತವ್ಯ ಎಂದು ನುಡಿದಿದ್ದಾರೆ. ಈ ಹಿಂದೆ ನಡೆದ ಒಪ್ಪಂದ ಸೂತ್ರದಡಿ ನಾನು ಈ ನಿರ್ಧಾರಕ್ಕೆ ಬಂದಿದ್ದು ಸಂಪುಟ ಸಹೋದ್ಯೋಗಿಗಳ ಮುಂದೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದರು.

ಮುಂದಿನ ಸಿಎಂ ಯಾರು ಎಂಬ ಹೆಸರನ್ನ ಸಿದ್ದರಾಮಯ್ಯ ಹೇಳಲಿಲ್ಲ. ಮುಂದೆ ಯಾರು ಸಿಎಂ ಕುರ್ಚಿ ಏರಲಿದ್ದಾರೆ ಎಂಬುದನ್ನು ಹೈಕಮಾಂಡ್ ಹೇಳಲಿದೆ. ಹೈಕಮಾಂಡ್ ನಾಯಕರು ನಾವು ತೀರ್ಮಾನ ಮಾಡಿ ಪ್ರಕಟಿಸುತ್ತೇವೆ ಎಂದಿದ್ದಾರೆ. ಅವರೇ ಎಲ್ಲ ಮುಂದಿನ ಪ್ರಕ್ರಿಯೆ ನಡೆಸುತ್ತಾರೆ ಎಂದು ಹೇಳಿದರು.
ಉಪಹಾರಸಭೆ-ಕಾಲಿಗೆ ಬಿದ್ದು ಸಿಎಂ ಆಶೀರ್ವಾದ ಪಡೆದ ಡಿಕೆಶಿ
ಸಿದ್ದರಾಮಯ್ಯನವರು ಈ ರೀತಿ ಹೇಳುತ್ತಿದ್ದಂತೆ ಡಿಕೆ ಶಿವಕುಮಾರ್ ಭಾವುಕರಾದರು ಕಣ್ಣುಗಳಲ್ಲಿ ದುಃಖದ ಛಾಯೆಯಿತ್ತು. ಸಿಎಂ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಕ್ಕೆ ಡಿಕೆಶಿ ದುಃಖಿತರಾದರು ಎಂಬ ಸುದ್ದಿ ಮೂಲಗಳಿಂದ ತಿಳಿದು ಬಂದಿದೆ.
ಬೆಳಗ್ಗೆ ಉಪಹಾರಕ್ಕೆ ಕಾವೇರಿ ನಿವಾಸಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯರನ್ನು ತಬ್ಬಿಕೊಂಡು ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಉಪಹಾರ ಸಭೆಗೂ ಮೊದಲು ಡಿಕೆಶಿ ಜೊತೆ ಮೊದಲು ಸಿಎಂ ಪ್ರತ್ಯೇಕ ಮಾತುಕತೆ ನಡೆಸಿದ್ದರು.ಏನೇ ಆಗಲಿ ರಾಜ್ಯದ ಅತ್ಯುನ್ನತ ಪದವಿಯ ಬದಲಾವಣೆಯ ಸನ್ನಿವೇಶವು ಎಲ್ಲರಲ್ಲೂ ಭಾವಪೂರ್ಣ ಬದಲಾವಣೆಗಳನ್ನು ಸೃಷ್ಟಿಸಿದವು.
#SiddaramaiahResigns #Siddaramaiah #DKShivakumar #KarnatakaPolitics #CMResignation




