ಮತ್ತೆ ತೈಲ ರೂ.7.5 ಹೆಚ್ಚಳ- ತೈಲಕಂಪನಿಗಳಿಂದ ಸವಾರರಿಗೆ ತಲೆನೋವು!
Fuel price hike people curse the governments

ನವದೆಹಲಿ: ದೇಶದ ಜನಸಾಮಾನ್ಯರ ಜೇಬಿಗೆ ತೈಲ ಕಂಪನಿಗಳು ಮತ್ತೆ ಕತ್ತರಿ ಹಾಕಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯ ನೆಪವೊಡ್ಡಿ, ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ.ಸೋಮವಾರ ಪೆಟ್ರೋಲ್ ದರವನ್ನು ಲೀಟರ್‌ಗೆ ರೂ. 2.61 ಹಾಗೂ ಡೀಸೆಲ್ ದರವನ್ನು ಲೀಟರ್‌ಗೆ ರೂ. 2.71 ರಷ್ಟು ಹೆಚ್ಚಿಸಲಾಗಿದ್ದು, ಕಳೆದ ಎರಡು ವಾರಗಳಲ್ಲಿ ಇದು ನಾಲ್ಕನೇ ಬಾರಿ ನಡೆದ ದರ ಏರಿಕೆಯಾಗಿದೆ. ಮೇ 15ರಿಂದ ಆರಂಭವಾದ ಈ ಸರಣಿ ಏರಿಕೆಯಿಂದಾಗಿ ಒಟ್ಟಾರೆ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಸುಮಾರು ರೂ. 7.5 ರಷ್ಟು ಹೆಚ್ಚಳವಾಗಿದ್ದು, ವಾಹನ ಸವಾರರು ಮತ್ತು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ.

ತರಕಾರಿ ಅಕ್ಕಿ ಬೇಳೆ ಬೆಲೆ ಎಲ್ಲಾ ಹೆಚ್ಚಾಗುತ್ತೆ- ದೇವರೇ ದಿಕ್ಕು!
ಇಂಧನ ದರ ಸರಣಿ ಏರಿಕೆಯಿಂದಾಗಿ ಸಾರಿಗೆ ವೆಚ್ಚ ದುಬಾರಿಯಾಗಲಿದ್ದು,ಮಧ್ಯಮ ವರ್ಗದ ಜನತೆ ಪ್ರಯಾಣಿಸಲು ಹಾಗು ಆಟೋ ಚಾಲಕರು ತಮ್ಮ ದೈನಂದಿನ ಜೀವನ ನಡೆಸಲು ಪರದಾಡುತ್ತಿದ್ದಾರೆ. ತೈಲ ಬೆಲೆ ಏರಿಕೆಯಾದೊಡನೆ, ದಿನಸಿ, ಹಣ್ಣು ಮತ್ತು ತರಕಾರಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಸೇರಿದಂತೆ ಆಹಾರ ವಸ್ತುಗಳ ಬೆಲೆ ಹಾಗೂ ಕೈಗಾರಿಕಾ ಉತ್ಪಾದನಾ ವೆಚ್ಚಗಳು ಹೆಚ್ಚಾಗುವ ಭೀತಿ ಎದುರಾಗಿದೆ. ಇದು ಒಟ್ಟಾರೆ ಮಾರುಕಟ್ಟೆಯಲ್ಲಿ ಮತ್ತೊಂದು ಸುತ್ತಿನ ಹಣದುಬ್ಬರಕ್ಕೆ ಕಾರಣವಾಗಬಹುದು ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.
ಪ್ರಮುಖ ನಗರಗಳಲ್ಲಿ ಇಂದಿನ ಇಂಧನ ದರ ಪಟ್ಟಿ
| ನಗರ | ಪೆಟ್ರೋಲ್ (ಪ್ರತಿ ಲೀಟರ್‌ಗೆ) | ಡೀಸೆಲ್ (ಪ್ರತಿ ಲೀಟರ್‌ಗೆ) |
| ಬೆಂಗಳೂರು | ರೂ. 108.77 | ರೂ. 95.66 |
| ದೆಹಲಿ | ರೂ. 102.12 | ರೂ. 95.20 |
| ಮುಂಬೈ | ರೂ. 111.21 | ರೂ. 97.83 |
| ಕೊಲ್ಕತ್ತಾ | ರೂ. 113.51 | ರೂ. 99.82 |
| ಚೆನ್ನೈ | ರೂ. 107.77 | ರೂ. 99.55 |
ಬೆಲೆ ಏರಿಕೆಯ ಏಣಿ ಆಟ
ರಾಜ್ಯ ಸರ್ಕಾರಗಳ ಸ್ಥಳೀಯ ತೆರಿಗೆಗಳು (VAT) ಬೇರೆ ಬೇರೆ ಇರುವುದರಿಂದ ಪ್ರತಿ ನಗರ ಹಾಗೂ ರಾಜ್ಯಗಳಲ್ಲಿ ದರಗಳಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ.ಎರಡು ವಾರಗಳ ‘ಬೆಲೆ ಏರಿಕೆ’ ಗ್ರಾಫ್:ಮೇ 15ರಂದು ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ತಲಾ ರೂ. 3 ರಷ್ಟು ಹೆಚ್ಚಿಸಲಾಗಿತ್ತು.ಮೇ 19ರಂದು ಎರಡನೇ ಬಾರಿ ಸುಮಾರು 90 ಪೈಸೆ ಏರಿಕೆ ಮಾಡಲಾಗಿತ್ತು.ಮೇ 23ರಂದು ಮೂರನೇ ಬಾರಿ ಪೆಟ್ರೋಲ್‌ಗೆ 87 ಪೈಸೆ ಮತ್ತು ಡೀಸೆಲ್‌ಗೆ 91 ಪೈಸೆ ಹೆಚ್ಚಳವಾಗಿತ್ತು.ಮೇ 25ರಂದು ಅಂದರೆ ಇಂದು ನಾಲ್ಕನೇ ಬಾರಿ ಪೆಟ್ರೋಲ್ ರೂ. 2.61 ಮತ್ತು ಡೀಸೆಲ್ ರೂ. 2.71 ರಷ್ಟು ಭಾರಿ ಏರಿಕೆ ಕಂಡಿದೆ. ಪಶ್ಚಿಮ ಏಷ್ಯಾದಲ್ಲಿನ ರಾಜತಾಂತ್ರಿಕ ಸಂಘರ್ಷಗಳು ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳ ಹಿನ್ನೆಲೆಯಲ್ಲಿ ಈ ಬೆಲೆ ಏರಿಕೆ ಅನಿವಾರ್ಯವಾಗಿತ್ತು ಎಂದು ತೈಲ ಕಂಪನಿಗಳು ಸಮರ್ಥಿಸಿಕೊಂಡಿವೆಯಾದರೂ, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.ವಾಹನ ಸವಾರರು ದ್ವಿಚಕ್ರ ವಾಹನಗಳನ್ನು ಹೊರಗೆ ತೆಗೆಯಲೂ ಆಗದೆ ಇರಲೂ ಆಗದೆ ಸಂದಿಗ್ಧ ಪರಿಸ್ಥಿತಿಯಲ್ಲಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
#FuelPriceHike #PetrolPrice #DieselPrice #Inflation #FuelPriceToday #KannadaNews #FreedomTV #Bengaluru #PriceRise #CommonManBurden




