Tamil nadu

ಜನನಾಯಕನಿಗೆ ಗಿಫ್ಟ್ ಕೊಟ್ಟ ನಿರ್ದೇಶಕ ವೆಂಕಟ್ ಪ್ರಭು!

Director Venkat Prabhu gifts number plate to CM Vijay

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ , ನಟ ವಿಜಯ್ ಅವರ ಇತ್ತೀಚಿನ ಸಿನಿಮಾ GOAT. ಈ ಸಿನಿಮಾವನ್ನು ಸಂಗೀತ ಮಾಂತ್ರಿಕ ಇಳಯರಾಜರವರ ತಮ್ಮ ಗಂಗೈ ಅಮರನ್ ಮಗನಾದ ವೆಂಕಟ್ ಪ್ರಭು ನಿರ್ದೇಶಿಸಿದ್ದರು.ವಿಜಯ್ ಹಾಗೂ ಪ್ರಶಾಂತ್ ನಟನೆಯ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಗಳಿಸಿತ್ತು. ಈ ಸಿನಿಮಾದಲ್ಲಿ ವಿಜಯ್ ಚಲಾಯಿಸಿದ ಕಾರಿನ ‘TN07 CM 2026’ ನಂಬರ್ ಪ್ಲೇಟ್ ಅನ್ನೇ ವೆಂಕಟ್ ಪ್ರಭು ದಳಪತಿಗೆ ಗಿಫ್ಟ್ ಆಗಿ ನೀಡುವ ಮೂಲಕ ಅಭಿಮಾನಿಗಳಿಗೆ ಅತೀವ ಸಂತೋಷ ನೀಡಿದ್ದಾರೆ.

2024 ರಲ್ಲೇ ವಿಜಯ್ ಗೆ ಸಿಎಂ ದಿಕ್ಸೂಚಿ ನೀಡಿದ್ದ GOAT!

ತಮಿಳುನಾಡಿನ ನೂತನ ಸಿಎಂ ವಿಜಯ್ ಅವರನ್ನು ಭೇಟಿಯಾದ ವೆಂಕಟ್ ಪ್ರಭು, ‘TN07 CM 2026’ ನಂಬರ್ ಪ್ಲೇಟ್ ನ್ನೇ ಗಿಫ್ಟ್ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೊಗಳು ಭಾರಿ ವೈರಲ್ ಆಗಿವೆ.
ಈ ಚಿತ್ರದಲ್ಲಿ ವಿಜಯ್ ಚಾಲನೆ ಮಾಡಿದ ಕಾರಿನ ನಂಬರ್’TN07 CM 2026′ ಆಗಿತ್ತು. ಇದಕ್ಕೆ ಇಂಬು ನೀಡುವಂತೆ ನಿಜ ಜೀವನದಲ್ಲಿಯೂ ವಿಜಯ್ ಸಿಎಂ ಆಗಿದ್ದಾರೆ. ಅವರ ರಾಜಕೀಯ ಪಯಣದ ಮುನ್ಸೂಚನೆಯನ್ನು ಆಗಲೇ ನೀಡಲಾಗಿತ್ತೇ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹತ್ತು ಹಲವು ಬಗೆಯ ಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.


ವೆಂಕಟ್ ಪ್ರಭು ತಮ್ಮ ಸೋಷಿಯಲ್ ಮೀಡಿಯ ಖಾತೆಯಲ್ಲಿ “ಒಂದು ಇತಿಹಾಸ ನಿರ್ಮಾಣವಾಗಿದೆ. ಈ ವಿಚಾರ ಕಲ್ಪನೆಯಿಂದ ದೃಶ್ಯರೂಪಕ್ಕೆ ಬಂದಿರುವುದೇ ವಿಸ್ಮಯ. 8 ಕೋಟಿ ತಮಿಳಿಗರ ಪ್ರೀತಿಪಾತ್ರ ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿ, GOATನ ಮೊದಲ ರಾಜಕೀಯ ಸಂಕೇತದ ನಂಬರ್ ಪ್ಲೇಟ್ ‘TN07 CM 2026’ ಗಿಫ್ಟ್ ಆಗಿ ನೀಡಿದ್ದು, ಕಲ್ಪನೆಯ ಮೊದಲ ಅನಾವರಣವಾಗಿದೆ. ಇದು ಕೇವಲ ಆರಂಭ” ಎಂದು ಬರೆದುಕೊಂಡಿದ್ದಾರೆ.

#CMVijay #ThalapathyVijay #VenkatPrabhu #GOATMovie #TN07CM2026 #TamilNaduCM #VijayPoliticalEntry #GOAT #CinemaToReality #TrendingNews #FreedomTV #KannadaNews

Comments (0)

Your email address will not be published. Required fields are marked *

Back to top button