CM ಗೆ ಅರ್ಥಶಾಸ್ತ್ರ, ಗಣಿತ ಗೊತ್ತೇ ಇಲ್ಲ- ಪ್ರತಾಪ್ ಸಿಂಹ ವಾಗ್ದಾಳಿ!
EX MP Pratap simha counter attack to CM siddu on Gold and fuel

ಮೈಸೂರು: ಡೀಸೆಲ್ ಮತ್ತು ಚಿನ್ನದ ಉಳಿತಾಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಸಲಹೆಯನ್ನು ಸಿಎಂ ಸಿದ್ದರಾಮಯ್ಯರವರು ಕಟುವಾಗಿ ಟೀಕಿಸಿದ್ದುರು. ಇದಕ್ಕೆ ಖಡಕ್ ತಿರುಗೇಟು ನೀಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಅವರ ಆರ್ಥಿಕ ನೀತಿಗಳನ್ನು ಲೇವಡಿ ಮಾಡಿದ್ದಾರೆ. ಹುಟ್ಟುವ ಪ್ರತಿ ಮಗುವಿನ ಮೇಲೂ ಸಾಲ ಹೊರಿಸಿರುವ ಸಿದ್ದರಾಮಯ್ಯ ವಿಶ್ವದ ಬಹುದೊಡ್ಡ ಅರ್ಥಶಾಸ್ತ್ರಜ್ಞರೆಂಬಂತೆ ವರ್ತಿಸುತ್ತಿದ್ದಾರೆ. ಆದರೆ ವಾಸ್ತವವಾಗಿ ಅವರಿಗೆ ಅರ್ಥಶಾಸ್ತ್ರವಾಗಲಿ, ಗಣಿತವಾಗಲಿ ಅರ್ಥವಾಗುವುದಿಲ್ಲ.ಕರ್ನಾಟಕದಲ್ಲಿ ಪ್ರತಿ ಮಗುವಿನ ಮೇಲೂ ಸಾಲ ಹೊರಿಸಿರುವ ಇವರು ಪ್ರಧಾನಿ ಮೋದಿ ಅವರ ಲೆಕ್ಕಾಚಾರ ತಪ್ಪು ಎನ್ನುತ್ತಾರೆ” ಎಂದು ಪ್ರತಾಪ್ ಸಿಂಹ ಕಿಡಿಕಾರಿದರು.

ಪ್ರಧಾನಿ ಮೋದಿ ತೂಕದ ಮಾತು
ವಿದೇಶಿ ವಿನಿಮಯ ಉಳಿತಾಯ: ನಮ್ಮ ದೇಶ ಅತಿ ಹೆಚ್ಚು ತೈಲ ಮತ್ತು ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ. ಮಧ್ಯಪ್ರಾಚ್ಯದಲ್ಲಿ ಜಾಗತಿಕ ಯುದ್ಧಗಳ ಹಿನ್ನೆಲೆಯಲ್ಲಿ ಇಂಧನ ಹಾಗೂ ಚಿನ್ನದ ಉಳಿತಾಯದ ಬಗ್ಗೆ ಪ್ರಧಾನಿ ಮೋದಿ ಉತ್ತಮ ಸಲಹೆ ನೀಡಿದ್ದಾರೆ.
ಒಂದು ವರ್ಷ ಚಿನ್ನ ಇಲ್ಲದೆ ಬದುಕಲು ಆಗುವುದಿಲ್ಲವೇ? ಇದರಿಂದ ವಿದೇಶಿ ವಿನಿಮಯ ಉಳಿಯುತ್ತದೆ. ಪ್ರಧಾನಿಗಳು ಶಾಶ್ವತವಾಗಿ ಚಿನ್ನ ಖರೀದಿ ಮಾಡಬೇಡಿ ಎಂದು ಹೇಳಿಲ್ಲ. ಅರ್ಥವ್ಯವಸ್ಥೆ ಗೊತ್ತಿರುವ ಜನ ಸಾಮಾನ್ಯರಿಗೂ ಮೋದಿ ಹೇಳಿರುವುದು ಸರಿ ಅನಿಸಿದೆ.ಆದರೆ ಸಿದ್ದರಾಮಯ್ಯ ಅವರಿಗೆ ಇದು ಅರ್ಥವಾಗದಿರುವುದು ದುಃಖಕರ ಸಂಗತಿ ಎಂದಿದ್ದಾರೆ.
ಸಿದ್ದರಾಮಯ್ಯನವರೇ ನೀವು ಅತಿಯಾಗಿ ಪ್ರೀತಿಸುವ ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಎಷ್ಟಿದೆ ಗೊತ್ತಾ? ಮೊದಲು ನೀವು ಹಾಕುವ ಸೆಸ್ಕ್ (Cess) ಹಾಗೂ ತೆರಿಗೆಗಳನ್ನು ಕಡಿಮೆ ಮಾಡಿ. ಮೋದಿ ಅವರಿಗೆ ಅರ್ಥಶಾಸ್ತ್ರದ ಪಾಠ ಮಾಡಲು ಹೋಗಬೇಡಿ. ನೀವು ಹಿಂದೆ ಒಂದು ಬಾರಿ ಮುಖ್ಯಮಂತ್ರಿಯಾಗಿದ್ದಾಗಲೂ ಮೈಸೂರಿನಲ್ಲೇ (ಚಾಮುಂಡೇಶ್ವರಿ ಕ್ಷೇತ್ರದಲ್ಲಿ) ಗೆಲ್ಲುವುದಕ್ಕೆ ಆಗಲಿಲ್ಲ. ನಿಮಗೆ ಜನರ ಭಾವನೆಗಳೇ ಗೊತ್ತಿಲ್ಲ” ಎಂದು ಸಿಂಹ ಲೇವಡಿ ಮಾಡಿದರು.
NEET ಪರೀಕ್ಷೆ ರದ್ದು
ಇದೇ ವೇಳೆ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ನೀಟ್ (NEET-UG) ಪರೀಕ್ಷೆ ರದ್ದು ಹಾಗೂ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿಯೂ ಪ್ರತಾಪ್ ಸಿಂಹ ಮಾತನಾಡಿ ಕೇಂದ್ರ ಸರ್ಕಾರ ಕರ್ಮಕಾಂಡ ಮುಚ್ಚಿಟ್ಟಿಲ್ಲ,ಹಗರಣವನ್ನು ಬಯಲು ಮಾಡಿದೆ ಎಂದು ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ. “ಪ್ರಶ್ನೆ ಪತ್ರಿಕೆ ಲೀಕ್ ಎನ್ನುವುದು ಇಡೀ ವ್ಯವಸ್ಥೆಗೆ ಅಂಟಿದ ದೊಡ್ಡ ಪಿಡುಗು. ಇದನ್ನು ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು. “ಕೇಂದ್ರ ಸರ್ಕಾರ ಎಲ್ಲೂ ಪೇಪರ್ ಲೀಕ್ ಹಗರಣವನ್ನು ಮುಚ್ಚಿಡಲು ಯತ್ನಿಸಿಲ್ಲ. ಬದಲಿಗೆ ಇಡೀ ಕರ್ಮಕಾಂಡವನ್ನು ಬಟ್ಟಬಯಲು ಮಾಡಿದೆ. ವ್ಯವಸ್ಥೆಯನ್ನು ಸರಿಪಡಿಸಲು ಪ್ರಾಮಾಣಿಕ ಯತ್ನ ನಡೆಸುತ್ತಿದೆ.”ಎಂದರು
KPSC ಹಗರಣಗಳಿಗೆ ಹೋಲಿಕೆ
“ರಾಜ್ಯದಲ್ಲಿ ಕೆಪಿಎಸ್ಸಿ (KPSC) ಹಗರಣಗಳಾದ ಮೇಲೆಯೂ ನೇಮಕಾತಿ ಪತ್ರಗಳನ್ನು ಹಂಚಿದ ಉದಾಹರಣೆಗಳಿವೆ. ಆದರೆ ಕೇಂದ್ರ ಸರ್ಕಾರ ಹಾಗೆ ಮಾಡಿಲ್ಲ. ಪ್ರತಿಭಾನ್ವಿತ ಮತ್ತು ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯ ಆಗಬಾರದು ಎಂಬ ಏಕೈಕ ಕಾರಣಕ್ಕೆ ಪರೀಕ್ಷೆಯನ್ನು ರದ್ದು ಮಾಡಿ ಮರು ಪರೀಕ್ಷೆಗೆ ಆದೇಶಿಸಿದೆ” ಎಂದು ಹೇಳುತ್ತಾ ನರೇಂದ್ರ ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ.
#PratapSimha #Siddaramaiah #MysuruPolitics #FuelPriceRise #GoldImports #NEET2026 #PaperLeakScam #KarnatakaPolitics #ModiVsSiddaramaiah #FreedomTVNews #BreakingNewsKannada


