Freedom TV

ಭಾರತದಲ್ಲಿ ಲಾಕ್‌ಡೌನ್‌- ಮೋದಿಯಿಂದಲೇ ಶುರುವಾಯ್ತು ದಿಗ್ಬಂಧನ!

Lock down Modi reducing vehicles and other facilities - Modi

ನವದೆಹಲಿ: ದೇಶದಲ್ಲಿ ಮತ್ತೆ ಲಾಕ್‌ಡೌನ್ ಭೀತಿ ಆವರಿಸಿದೆಯೇ? ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ನಡೆಗಳು ಮತ್ತು ಜಾಗತಿಕ ವಿದ್ಯಮಾನಗಳು ಇಂತಹದೊಂದು ದೊಡ್ಡ ಮುನ್ಸೂಚನೆಯನ್ನು ನೀಡುತ್ತಿವೆ. ತಮ್ಮ ಮೇಲೆ ತಾವೇ ನಿರ್ಬಂಧ ಹೇರಿಕೊಂಡ ಪ್ರಧಾನಿ ಮೋದಿ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆ 50 ಪರ್ಸೆಂಟ್‌ ಕಡಿಮೆ ಮಾಡಿಕೊಂಡಿದ್ದಾರೆ. ಇದೇ ಹಾದಿಯಲ್ಲಿ ಅಮಿತ್‌ ಶಾ ಮೋದಿ ಕ್ಯಾಬಿನೆಟ್‌ನ ಸಹೋದ್ಯೋಗಿಗಳು ಮಿತ್ಯವ್ಯಯ ಮಂತ್ರ ಜಪಿಸುತ್ತಿರುವುದು ಲಾಕ್ ಡೌನ್ ಮುನ್ಸೂಚನೆ ನೀಡಿದೆ.ತಿಂಗಳ ಹಿಂದೆಯೇ ‘ಫ್ರೀಡಂ ಟಿವಿ’ ಮಾಡಿದ್ದ ಸ್ಫೋಟಕ ವರದಿ ಈಗ ಅಕ್ಷರಶಃ ನಿಜವಾಗುತ್ತಿದೆ! ಇವತ್ತಿನ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲೂ ಲಾಕ್‌ಡೌನ್ ಬಗ್ಗೆ ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.

ತಮ್ಮ ಮೇಲೆ ತಾವೇ ನಿರ್ಬಂಧ ಹೇರಿಕೊಂಡ ಮೋದಿ!
ಮಿತವ್ಯಯದ ಮಂತ್ರ ಜಪಿಸುತ್ತಿರುವ ಪ್ರಧಾನಿ ಮೋದಿ, ತಾವೇ ಮಾದರಿಯಾಗುವ ನಿಟ್ಟಿನಲ್ಲಿ ತಮ್ಮ ಭದ್ರತೆಯಲ್ಲಿ ಭಾರಿ ಕಡಿತ ಮಾಡಿಕೊಂಡಿದ್ದಾರೆ.
ಪ್ರಧಾನಿಯವರ ಬೆಂಗಾವಲು ವಾಹನಗಳ ಸಂಖ್ಯೆ ಶೇ. 50 ರಷ್ಟು ಕಡಿತ.

ಎಸ್‌ಪಿಜಿ (SPG) ಭದ್ರತಾ ಸಿಬ್ಬಂದಿಯ ಸಂಖ್ಯೆಯಲ್ಲೂ ಶೇ. 50 ರಷ್ಟು ಇಳಿಕೆ.

ಇರಾನ್-ಯುಎಸ್ ಯುದ್ಧದ ಕಾರ್ಮೋಡ-ಇಂಧನ ಕೊರತೆ!
ಇರಾನ್ ಮತ್ತು ಅಮೆರಿಕ ನಡುವೆ ಯುದ್ಧ ಆರಂಭವಾದ ಬೆನ್ನಲ್ಲೇ ಭಾರತದಲ್ಲಿ ಇಂಧನ ಮತ್ತು ಗ್ಯಾಸ್ ಅಭಾವ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಇದೇ ಕಾರಣಕ್ಕಾಗಿ ದೇಶದಲ್ಲಿ ‘ಇಂಧನ ಲಾಕ್‌ಡೌನ್’ ಅನಿವಾರ್ಯವಾಗುವ ಸೂಚನೆ ಸಿಗುತ್ತಿದೆ. ಒಂದು ವೇಳೆ ಎಚ್ಚೆತ್ತುಕೊಳ್ಳದಿದ್ದರೆ ರಸ್ತೆ ರಸ್ತೆಯಲ್ಲೇ ವಾಹನಗಳು ನಿಲ್ಲಲಿವೆ, ಮನೆಯ ಒಲೆಗಳು ಉರಿಯದ ಸ್ಥಿತಿ ಬರಬಹುದು.ಸಾರ್ವಜನಿಕರಿಗೆ ಪ್ರಧಾನಿ ಮೋದಿ ನೀಡಿದ ಎಚ್ಚರಿಕೆಗಳೇನು. ಮುಂಬರುವ ಗಂಡಾಂತರದ ಬಗ್ಗೆ ಪ್ರಧಾನಿ ಪದೇ ಪದೇ ಸುಳಿವು ನೀಡುತ್ತಿದ್ದು,ಜನತೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಲು ಕೋರಲಾಗಿದೆ:

ಇಂಧನ ಮಿತವ್ಯಯ: ಒಬ್ಬರೇ ಪ್ರಯಾಣಿಸುವಾಗ ಕಾರು ಬಳಸಬೇಡಿ, ಸಾರ್ವಜನಿಕ ಸಾರಿಗೆ ಬಳಸಿ.

ವರ್ಕ್ ಫ್ರಮ್ ಹೋಮ್: ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿ ಮತ್ತೆ ಜಾರಿಗೆ ತನ್ನಿ.

ಚಿನ್ನದ ವ್ಯಾಮೋಹ ಬಿಡಿ: ಆಮದಾಗುವ ಚಿನ್ನದಿಂದ ರೂಪಾಯಿ ಮೌಲ್ಯ ಕುಸಿಯುತ್ತಿದೆ, ಚಿನ್ನ ಖರೀದಿ ಕಡಿಮೆ ಮಾಡಿ.

ಆಮದು ವಸ್ತುಗಳ ಬಳಕೆ ತಗ್ಗಿಸಿ: ದೇಶದ ಆರ್ಥಿಕತೆ ಉಳಿಸಲು ಸ್ವದೇಶಿ ವಸ್ತುಗಳಿಗೆ ಒತ್ತು ನೀಡಿ.

ಬಿಜೆಪಿ ರಾಜ್ಯಗಳಲ್ಲೂ ‘ಮಿತವ್ಯಯ’ದ ಪರ್ವ ಪ್ರಾರಂಭವಾಗಿದೆ. ಮೋದಿ ಸೂಚನೆ ಬೆನ್ನಲ್ಲೇ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ದೆಹಲಿ ಸಿಎಂ ರೇಖಾ ಗುಪ್ತಾ, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಹಾಗೂ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರು ತಮ್ಮ ಭದ್ರತೆ ಮತ್ತು ಇತರ ಸರ್ಕಾರಿ ಖರ್ಚುಗಳಲ್ಲಿ ಭಾರಿ ಕಡಿತ ಘೋಷಿಸಿದ್ದಾರೆ. ಒಟ್ಟಾರೆಯಾಗಿ, ದೇಶದ ಆರ್ಥಿಕತೆ ಮತ್ತು ಇಂಧನ ಸುರಕ್ಷತೆಯ ದೃಷ್ಟಿಯಿಂದ ಕಠಿಣ ದಿನಗಳು ಎದುರಾಗಲಿವೆ.ಸಾರ್ವಜನಿಕರು ಈಗಲೇ ಎಚ್ಚೆತ್ತುಕೊಂಡು ಮಿತವ್ಯಯ ಪಾಲಿಸದಿದ್ದರೆ ಲಾಕ್‌ಡೌನ್ ಅನಿವಾರ್ಯವಾಗಲಿದೆ.

#LockdownAlert #PMModi #FreedomTVExclusive #FuelShortage #IranUSWar #EconomyCrisis #SaveFuel #NarendraModi #IndiaUpdate #BreakingNews #Mithavyaya

Comments (0)

Your email address will not be published. Required fields are marked *

Back to top button