ತಮಿಳುನಾಡು ಧಾರ್ಮಿಕ ಕೇಂದ್ರಗಳ ಬಳಿ ವೈನ್ ಶಾಪ್ ಬಂದ್
Wineshops ban near Religious places in Tamilnadu

ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಳಪತಿ ವಿಜಯ್ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದ್ದಾರೆ. ಜನರ ಭಾವನೆಗಳಿಗೆ ಗೌರವ ನೀಡುವ ನಿಟ್ಟಿನಲ್ಲಿ ಧಾರ್ಮಿಕ ಕೇಂದ್ರಗಳ ಬಳಿ ಇರುವ ಮದ್ಯದ ಅಂಗಡಿಗಳನ್ನು ಬಂದ್ ಮಾಡುವಂತೆ ಐತಿಹಾಸಿಕ ಆದೇಶ ಹೊರಡಿಸಿದ್ದಾರೆ.ದೇವಸ್ಥಾನ,ಮಸೀದಿ ಮತ್ತು ಚರ್ಚ್‌ಗಳ ಸುತ್ತಮುತ್ತಲಿರುವ ವೈನ್ ಶಾಪ್‌ಗಳಿಂದ ಭಕ್ತಾದಿಗಳಿಗೆ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿತ್ತು.ಈಗ ಅದಕ್ಕೆ ಮುಕ್ತಿ ದೊರೆತಿದೆ.

ಧಾರ್ಮಿಕ ಕೇಂದ್ರಗಳ ಪಾವಿತ್ರ್ಯತೆ ಕಾಪಾಡಲು ‘ಮಾಸ್ಟರ್’ ಪ್ಲಾನ್!
ತಮಿಳುನಾಡಿನೆಲ್ಲೆಡೆ ಧಾರ್ಮಿಕ ಕೇಂದ್ರಗಳ ಬಳಿ ಗುರುತಿಸಲಾದ ಸುಮಾರು 717 ವೈನ್ ಶಾಪ್‌ಗಳನ್ನು ತಕ್ಷಣದಿಂದಲೇ ಮುಚ್ಚಲು ಆದೇಶ ನೀಡಲಾಗಿದೆ. ಭವಿಷ್ಯದಲ್ಲಿ ಯಾವುದೇ ಧಾರ್ಮಿಕ ಕೇಂದ್ರಗಳ ಸಮೀಪ ಮದ್ಯದ ಅಂಗಡಿ ತೆರೆಯಲು ಅವಕಾಶವಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಧಿಕಾರ ವಹಿಸಿಕೊಂಡ ದಿನವೇ ಸಿಎಂ ಜೋಸೆಫ್ ವಿಜಯ್ ರವರು ತಮಿಳುನಾಡು ಜನತೆಗೆ ಈ ಕೆಳಕಂಡ ಜನಪರ ಯೋಜನೆಗಳನ್ನು ಉಡುಗೊರೆಯಾಗಿ ನೀಡಿದ್ದರು.
ಉಚಿತ ವಿದ್ಯುತ್ ಭಾಗ್ಯ: ಪ್ರತಿ ಮನೆಗೆ (ಗೃಹ ಬಳಕೆ) 200 ಯೂನಿಟ್ ಉಚಿತ ವಿದ್ಯುತ್
ಮಾದಕ ದ್ರವ್ಯ ಮುಕ್ತ ತಮಿಳುನಾಡು: ಮಾದಕ ದ್ರವ್ಯ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಪ್ರತ್ಯೇಕ ಮಾದಕವಸ್ತು ಕಳ್ಳಸಾಗಣೆ ವಿರೋಧಿ ಘಟಕಗಳ ಸ್ಥಾಪನೆ
ಮಹಿಳಾ ರಕ್ಷಣೆಗೆ ‘ಸಿಂಗಪ್ಪೆಣ್’: ಮಹಿಳೆಯರಿಗೆ ಭದ್ರತೆ ನೀಡಲು ‘ಸಿಂಗಪ್ಪೆಣ್’ (Singappen) ವಿಶೇಷ ಕಾರ್ಯಪಡೆಯ ರಚನೆ
ಈ ಬೆನ್ನಲ್ಲೇ ಧಾರ್ಮಿಕ ಕೇಂದ್ರಗಳ ಸಮೀಪ ಮದ್ಯಪಾನ ಅಂಗಡಿಗಳಿಗೆ ಬೀಗ ಹಾಕಿಸಿರುವುದು ತಮಿಳುನಾಡಿನ ನಾಗರಿಕರಿಗೆ ಸಂತೃಪ್ತಿ ತಂದಿದೆ.
#CMVijay #TamilNaduPolitics #ThalapathyVijay #WineShopBan #FreeElectricity #WomenSafety #Singapen #DrugFreeTamilNadu #TVKParty #FreedomTV #BreakingNews




