ದೇಶ/ವಿದೇಶಸುದ್ದಿ

ಪತ್ನಿ ಸೇವಕಿಯಲ್ಲ..ಪತಿಯೂ ಪಾಲುದಾರ !ಕರ್ನಾಟಕ ಕೇಸಲ್ಲಿ ಸುಪ್ರೀಂ ಅಭಿಮತ !

ನವದೆಹಲಿ : ಪತ್ನಿ ಮನೆಯ ಸೇವಕಿಯಲ್ಲ, ಜೀವನ ಸಂಗಾತಿ ಎಂಬ ಮಹತ್ವದ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ವ್ಯಕ್ತಪಡಿಸಿದೆ.
ಕರ್ನಾಟಕದ ಒಂದು ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಮನೆ ಕೆಲಸಗಳಲ್ಲಿ ಪತಿಗೂ ಸಮಾನ ಜವಾಬ್ದಾರಿ ಇದೆ ಎಂದು ಸ್ಪಷ್ಟಪಡಿಸಿದೆ. ಮನೆ ಸ್ವಚ್ಛತೆ, ಬಟ್ಟೆ ಒಗೆತ ಸೇರಿದಂತೆ ಎಲ್ಲಾ ಗೃಹಕಾರ್ಯಗಳಲ್ಲಿ ಪತಿಯೂ ಪಾಲುದಾರರಾಗಬೇಕು ಎಂದು ತಿಳಿಸಿದೆ.

ಈ ಪ್ರಕರಣದಲ್ಲಿ, ಕಿರುಕುಳದ ಆರೋಪದ ಆಧಾರದಲ್ಲಿ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿದ್ದರೂ, ಹೈಕೋರ್ಟ್ ಅದನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ವಿಚಾರಣೆ ವೇಳೆ ಪತ್ನಿ ವಿರುದ್ಧ ಕಿರುಕುಳದ ಆರೋಪ ಏನು ಎಂದು ನ್ಯಾಯಪೀಠ ಪ್ರಶ್ನಿಸಿದಾಗ, “ಅವಳು ಸರಿಯಾಗಿ ಅಡುಗೆ ಮಾಡಲ್ಲ” ಎಂಬ ಆರೋಪವನ್ನು ಪತಿ ಮುಂದಿಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕಾಲ ಬದಲಾಗಿದೆ, ಮನೆ ಕೆಲಸಗಳಲ್ಲಿ ಪತಿಯೂ ಭಾಗವಹಿಸಬೇಕು.

ಹೈಕೋರ್ಟ್ ನೀಡಿದ ಆದೇಶ ಸರಿಯಾಗಿದೆ ಎಂದು ಅಭಿಪ್ರಾಯಪಟ್ಟ ಸುಪ್ರೀಂಕೋರ್ಟ್, ದಂಪತಿಗಳು ಇಬ್ಬರೂ ಶಿಕ್ಷಕರಾಗಿರುವುದರಿಂದ ಅವರನ್ನು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 27ಕ್ಕೆ ಮುಂದೂಡಲಾಗಿದೆ.

Comments (0)

Your email address will not be published. Required fields are marked *

Back to top button