Top Newsದೇಶ/ವಿದೇಶಸುದ್ದಿ

ಕಚ್ಚಿ ತಿನ್ನೋ ವಿಕೃತಿ; ಪೊಲೀಸರ ಮುಂದೆಯೇ ನಕ್ಕ ಕಿರಾತಕಿ!

ಕೇರಳ: ಕೊಚ್ಚಿಯ ಪಣಂಪಿಲ್ಲಿ ನಗರದಲ್ಲಿ ರಾಕ್ಷಸೀ ಕೃತ್ಯವೊಂದು ನಡೆದಿದೆ. ಮಾತು ಬಾರದ, ಕಿವಿ ಕೇಳಿಸದ ಅಮಲ್ ದೇವ್ ಎಂಬ ವಿಶೇಷಚೇತನ ಯುವಕನನ್ನೇ ಟಾರ್ಗೆಟ್ ಮಾಡಿದ ಸಫ್ನಾ ಎಂಬ ಯುವತಿ, ಇನ್‌ಸ್ಟಾಗ್ರಾಮ್ ಮೂಲಕ ಆತನ ವಿಶ್ವಾಸ ಗಳಿಸಿದ್ದಳು. ಹೋಟೆಲ್‌ಗೆ ಬರಮಾಡಿಕೊಂಡು ಆತನ ಮೇಲೆ ಸೆಕ್ಸ್‌ಗೆ ಒತ್ತಾಯಿಸಿದ್ದಲ್ಲದೆ, ಆತ ನಿರಾಕರಿಸಿದಾಗ ಮೃಗೀಯವಾಗಿ ವರ್ತಿಸಿದ್ದಾಳೆ. “ನಿನ್ನನ್ನು ಕಚ್ಚಿ ಕಚ್ಚಿ ತಿನ್ನಲಾ?” ಎಂದು ವಿಕೃತಿ ಮೆರೆದ ಈಕೆ, ಆತನ ಮೈಯೆಲ್ಲಾ ಚುಚ್ಚಿ ಗಾಯಗೊಳಿಸಿದ್ದಾಳೆ. ಅಷ್ಟೇ ಅಲ್ಲದೆ, ತನ್ನ ಗ್ಯಾಂಗ್ ಜೊತೆ ಸೇರಿ ಅಮಲ್‌ನ ಪಕ್ಕೆಲುಬುಗಳನ್ನು ಮುರಿದು, ಆತನ ಬೆತ್ತಲೆ ವಿಡಿಯೋ ಚಿತ್ರೀಕರಿಸಲು ಯತ್ನಿಸಿ ವಿಕೃತಿಯ ಪರಮಾವಧಿ ಮೆರೆದಿದ್ದಾಳೆ.

ಅತ್ಯಂತ ಆಘಾತಕಾರಿ ವಿಷಯವೆಂದರೆ, ಈಕೆಯ ಕ್ರೌರ್ಯಕ್ಕೆ ಸಿಲುಕಿದ ಅಮಲ್ ದೇವ್‌ಗೆ ನೋವಿನಿಂದ ಕಿರುಚಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಮಾಡಬಾರದ ಅನಾಚಾರವೆಲ್ಲಾ ಮಾಡಿ ಪೊಲೀಸರ ಮುಂದೆ ಈ ಕಿರಾತಕಿ ಸಫ್ನಾ ನಗುತ್ತಾ ನಿಂತಿರುವ ರೀತಿ ಕಂಡು ಖುದ್ದು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಸದ್ಯ ಕದವಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಐವರು ಆರೋಪಿಗಳ ಪೈಕಿ ನಾಲ್ವರನ್ನು ಜೈಲಿಗಟ್ಟಿದ್ದಾರೆ.

Comments (0)

Your email address will not be published. Required fields are marked *

Back to top button