Top Newsದೇಶ/ವಿದೇಶಸುದ್ದಿ

ದುಬೈ ‘ಗಗನಚುಂಬಿ’ ಬುರ್ಜ್ ಖಲೀಫಾ ಮೇಲೆ ಇರಾನ್ ದಾಳಿ?

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಕಿಡಿ ಇದೀಗ ದುಬೈನತ್ತಲೂ ಹಬ್ಬಿದೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ ಎಂಬ ಗಾಳಿಸುದ್ದಿ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತಿವೆ. 828 ಮೀಟರ್ ಎತ್ತರದ ಈ ಐಕಾನಿಕ್ ಕಟ್ಟಡದ ತುದಿಯಿಂದ ಕಪ್ಪು ಹೊಗೆ ಏರುತ್ತಿರುವ ದೃಶ್ಯಗಳು ಜಗತ್ತನ್ನೇ ಬೆಚ್ಚಿಬೀಳಿಸಿವೆ.

ಸುಮಾರು 1.5 ಬಿಲಿಯನ್ ಡಾಲರ್ ಮೌಲ್ಯದ ಈ ಗಗನಚುಂಬಿ ಕಟ್ಟಡದ ಸಮೀಪ ಇರಾನ್‌ನ ಡ್ರೋನ್‌ಗಳು ಸುಳಿದಾಡುತ್ತಿವೆ ಎನ್ನಲಾದ ದೃಶ್ಯಗಳು ಆತಂಕವನ್ನು ಇಮ್ಮಡಿಗೊಳಿಸಿವೆ. ಕ್ಷಿಪಣಿ ದಾಳಿಯಿಂದ ಬುರ್ಜ್ ಖಲೀಫಾಗೆ ದೊಡ್ಡ ಮಟ್ಟದ ಹಾನಿಯಾಗಿದೆ ಎಂದು ಪೋಸ್ಟ್ ಮಾಡಲಾಗುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿವೆ. ಆದರೆ, ಈ ವಿಡಿಯೋಗಳು ಎಡಿಟ್ ಮಾಡಿದ್ದೇ ಅಥವಾ ನಿಜವಾಗಿಯೂ ದಾಳಿ ನಡೆದಿದೆಯೇ ಎಂಬ ಬಗ್ಗೆ ದುಬೈ ಸರ್ಕಾರ ಅಥವಾ ಅಂತರಾಷ್ಟ್ರೀಯ ಸಂಸ್ಥೆಗಳಿಂದ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ.

ಈ ವೈಮಾನಿಕ ದಾಳಿಯ ಭೀತಿಯ ಬೆನ್ನಲ್ಲೇ ದುಬೈನ ಪ್ರವಾಸೋದ್ಯಮ ಮತ್ತು ಆರ್ಥಿಕ ಕೇಂದ್ರಗಳ ಮೇಲೆ ಕಾರ್ಮೋಡ ಕವಿದಿದೆ. ಕ್ಷಿಪಣಿ ಅಪ್ಪಳಿಸಿರುವುದು ಕಟ್ಟಡಕ್ಕೋ ಅಥವಾ ಸಮೀಪದ ಪ್ರದೇಶಕ್ಕೋ ಎಂಬುದು ಸದ್ಯಕ್ಕೆ ನಿಗೂಢವಾಗಿಯೇ ಉಳಿದಿದೆ. ಯುದ್ಧದ ಭೀತಿಯ ನಡುವೆ ಇಂತಹ ವಿಡಿಯೋಗಳು ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಸತ್ಯಾಸತ್ಯತೆ ತಿಳಿಯಲು ಇಡೀ ವಿಶ್ವವೇ ದುಬೈ ಅಪ್‌ಡೇಟ್ಸ್‌ಗಾಗಿ ಕಾಯುತ್ತಿದೆ.

Comments (0)

Your email address will not be published. Required fields are marked *

Back to top button