Top Newsರಾಜಕೀಯರಾಜ್ಯಸುದ್ದಿ

ದಲಿತ ಸಿಎಂ ಚರ್ಚೆ ನಡುವೆ ನಾನು ರೇಸ್‌ನಲ್ಲಿ ಇಲ್ಲವೆಂದು ಸತೀಶ್ ಜಾರಕಿಹೊಳಿ ಸ್ಪಷ್ಟನೆ

ಉತ್ತರ ಕನ್ನಡ: ಕರ್ನಾಟಕ ರಾಜಕೀಯದಲ್ಲಿ ಸದ್ಯ ಬಿಸಿಬಿಸಿ ಚರ್ಚೆಯಾಗುತ್ತಿರುವ ‘ದಲಿತ ಮುಖ್ಯಮಂತ್ರಿ’ ವಿಚಾರವಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಪ್ರತಿಕ್ರಿಯೆ ನೀಡಿ ಸಿಎಂ ಬದಲಾವಣೆ ಮತ್ತು ದಲಿತ ಸಿಎಂ ಆಯ್ಕೆಯ ಕುರಿತಾದ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಪಕ್ಷದಲ್ಲಿ ಮತ್ತು ಕಾರ್ಯಕರ್ತರಲ್ಲಿ ನಾಯಕತ್ವದ ಬಗ್ಗೆ ಕೆಲವು ಗೊಂದಲಗಳಿರುವುದು ನಿಜ, ಆದರೆ ಸಿಎಂ ಹುದ್ದೆಯನ್ನು ಹೈಕಮಾಂಡ್ ಐದು ವರ್ಷಗಳ ಅವಧಿಗೆ ನೀಡಿದೆ , “ಚರ್ಚೆಯಾದ ತಕ್ಷಣ ಯಾರನ್ನೂ ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ, ಅಂತಿಮವಾಗಿ ಹೈಕಮಾಂಡ್ ನಿರ್ಧಾರವೇ ಪರಮೋಚ್ಚ” ಸದ್ಯಕ್ಕೆ ತಾವು ಯಾವುದೇ ಸಿಎಂ ರೇಸ್‌ನಲ್ಲಿ ಇಲ್ಲ ಎಂದು ಸ್ಪಷ್ಟವಾಗಿ ನುಡಿದಿದ್ದಾರೆ.

ಬಿಜೆಪಿಯ ಭ್ರಷ್ಟಾಚಾರದ ಆರೋಪಗಳಿಗೆ ತಿರುಗೇಟು ನೀಡಿದ ಅವರು, ಬಿಜೆಪಿ ಶಾಸಕರೇ ಲೋಕಾಯುಕ್ತ ಬಲೆಗೆ ಬೀಳುವ ಮೂಲಕ ತಮ್ಮ ಭ್ರಷ್ಟಾಚಾರಕ್ಕೆ ತಾವೇ ಸಾಕ್ಷಿ ನೀಡುತ್ತಿದ್ದಾರೆ ಎಂದು ಕುಟುಕಿದರು.

Comments (0)

Your email address will not be published. Required fields are marked *

Back to top button