ಸುದ್ದಿ

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪರ್ಸನಲ್‌ ಸೆಕ್ರೆಟರಿ ಮಗ ಆತ್ಮಹತ್ಯೆ.. ಕಾರಣ?

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ ಅವರ ಪರ್ಸನಲ್‌ ಸೆಕ್ರೆಟರಿ ಚಂದ್ರು ಅವರ ಪುತ್ರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಸ್ಥಳಕ್ಕೆ ಸಂಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಎಂಎಸ್‌ ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದಾರೆ.

ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿಯ ಮನೆಯಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದ್ದು, ಮಲಗಿದ್ದ ಕೊಣೆಯ ಬಾಗಿಲು ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಲಭ್ಯವಾಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಹೇಮಂತ ಕುಟುಂಬಸ್ಥರು ತಿರುಪತಿಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದರಂತೆ ಇದರ ಬೆನ್ನಲೇ ಈ ಅವಘಡ ಸಂಭವಿಸಿದೆ.

ಹೇಮಂತ್‌ ಸಹೋದರಿಗೆ ಕೆಲ ಆಭರಣ ಕೊಡಿಸಲಾಗಿತು. ಈ ವಿಷಯವಾಗಿ ಹೇಮಂತ್‌ ತನ್ನ ತಾಯಿ ಜೊತೆಗೆ ಜಗಳವಾಡಿದ್ದನಂತೆ. ತಂಗಿ ಕೇಳಿದ್ದೆಲ್ಲಾ ಕೊಡಿಸ್ತೀರಾ, ನನಗೇನೂ ಕೊಡಿಸಲ್ಲ ಎಂದು ಕೋಪದಲ್ಲಿ ಕೋಣೆಗೆ ಹೋಗಿದ್ದ ಹೇಮಂತ್ ಬಾಗಿಲು ಹಾಕಿಕೊಂಡಿದ್ದನು. ರಾತ್ರಿ ಊಟಕ್ಕೂ ಸಹ ಕೋಣೆಯಿಂದ ಹೊರಗೆ ಬಂದಿರಲಿಲ್ಲ. ರಾತ್ರಿ ಸ್ನೇಹಿತರೊಂದಿಗೆ ಮಾತನಾಡಿದ ಬಳಿಕ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದನಂತೆ. ತಡರಾತ್ರಿ ನೇಣು ಬಿಗಿದುಕೊಂಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

Comments (0)

Your email address will not be published. Required fields are marked *

Back to top button