ದೇಶ/ವಿದೇಶಸುದ್ದಿ

ಷೇರು ಮಾರುಕಟ್ಟೆಯಲ್ಲಿ ಸುನಾಮಿ: ಇನ್ವೆಸ್ಟರ್ಸ್‌ಗೆ ಬಂಪರ್ ಲಾಭ

ಮುಂಬೈ: ಭಾರತೀಯ ಷೇರು ಮಾರುಕಟ್ಟೆ ಇಂದು ಇತಿಹಾಸದಲ್ಲೇ ಅತ್ಯಂತ ದೊಡ್ಡ ಏರಿಕೆಗೆ ಸಾಕ್ಷಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಉತ್ಪನ್ನಗಳ ಮೇಲಿನ ಸುಂಕವನ್ನು (Tariff) ಶೇ. 25ರಿಂದ ಶೇ. 18ಕ್ಕೆ ಇಳಿಕೆ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ, ದಲಾಲ್ ಸ್ಟ್ರೀಟ್‌ನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಮಂಗಳವಾರ ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಸೂಚ್ಯಂಕಗಳು ರೌದ್ರಾವತಾರ ತಾಳಿದವು. ಬರೋಬ್ಬರಿ 3656.74 ಅಂಕಗಳ ಜಿಗಿತದೊಂದಿಗೆ 85,323.20 ಮಟ್ಟದಲ್ಲಿ ವಹಿವಾಟು ಆರಂಭಿಸಿತು. 1219.65 ಅಂಕಗಳ ಬಂಪರ್ ಏರಿಕೆ ಕಂಡು 26,308.05 ಅಂಕಗಳೊಂದಿಗೆ ಐತಿಹಾಸಿಕ ಆರಂಭ ಪಡೆಯಿತು. ಬಜೆಟ್ ಘೋಷಣೆಯ ನಂತರ ಅನುಭವಿಸಿದ್ದ ಲಕ್ಷಾಂತರ ಕೋಟಿ ರೂಪಾಯಿಗಳ ನಷ್ಟವನ್ನು ಮಾರುಕಟ್ಟೆ ಒಂದೇ ದಿನದಲ್ಲಿ ಮರೆತಿದೆ.

ವ್ಯಾಪಾರ ಒಪ್ಪಂದದ ಸುದ್ದಿ ಹೊರಬೀಳುತ್ತಿದ್ದಂತೆಯೇ ರಫ್ತು ಆಧಾರಿತ ಕಂಪನಿಗಳ ಷೇರುಗಳು ರಾಕೆಟ್ ವೇಗದಲ್ಲಿ ಏರಿಕೆ ಕಂಡಿವೆ. ಶೇ. 7.16ರಷ್ಟು ಏರಿಕೆಯೊಂದಿಗೆ ಮಾರುಕಟ್ಟೆಯ ಲೀಡರ್ ಆಗಿ ಹೊಳೆಯುತ್ತಿದೆ. ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಕೂಡ ಶೇ. 4ರಷ್ಟು ಲಾಭ ಗಳಿಸಿ ಹೂಡಿಕೆದಾರರ ಕೈ ಹಿಡಿದಿದೆ.

ಮಾರುಕಟ್ಟೆಯ ಈ ನಾಗಾಲೋಟದಲ್ಲಿ ಅತಿ ಹೆಚ್ಚು ಲಾಭ ಗಳಿಸಿದ ಟಾಪ್ 10 ಷೇರುಗಳ ಪಟ್ಟಿ
ಅದಾನಿ ಪೋರ್ಟ್ಸ್ (Adani Ports)

ರಿಲಯನ್ಸ್ ಇಂಡಸ್ಟ್ರೀಸ್ (Reliance)

ಬಜಾಜ್ ಫೈನಾನ್ಸ್ (Bajaj Finance)

ಎಟರ್ನಲ್ ಶೇರ್ (Eternal Share)

ಬಜಾಜ್ ಫಿನ್‌ಸರ್ವ್ (Bajaj Finserv)

ಇಂಡಿಗೊ (IndiGo)

ಮಹೀಂದ್ರಾ & ಮಹೀಂದ್ರಾ (M&M)

ಸನ್ ಫಾರ್ಮಾ (Sun Pharma)

ಇನ್ಫೋಸಿಸ್ (Infosys)

ಟೈಟಾನ್ ಮತ್ತು ಮಾರುತಿ (Titan & Maruti)

ಬಜೆಟ್‌ನಲ್ಲಿ ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ಏರಿಕೆಯಿಂದ ಕಂಗೆಟ್ಟಿದ್ದ ಟ್ರೇಡರ್‌ಗಳಿಗೆ ಈ ಟ್ರೇಡ್ ಡೀಲ್ ‘ಜೀವದಾನ’ ನೀಡಿದಂತಿದೆ. ಐಟಿ, ಫಾರ್ಮಾ ಮತ್ತು ಆಟೋಮೊಬೈಲ್ ವಲಯಗಳು ಅಮೆರಿಕದ ಸುಂಕ ಕಡಿತದಿಂದ ಹೆಚ್ಚಿನ ಲಾಭ ಪಡೆಯಲಿವೆ. ವಿದೇಶಿ ಹೂಡಿಕೆದಾರರು (FII) ಮತ್ತೆ ಭಾರತದತ್ತ ಮುಖ ಮಾಡಿರುವುದು ಮಾರುಕಟ್ಟೆಯ ಬಲ ಹೆಚ್ಚಿಸಿದೆ.

Comments (0)

Your email address will not be published. Required fields are marked *

Back to top button