ದೇಶ/ವಿದೇಶಸುದ್ದಿ

ಪಾಲಾಶ್​ ಮುಚ್ಚಲ್​​​ ಜೊತೆಗಿನ ಮದುವೆ ಕ್ಯಾನ್ಸಲ್​​​​: ಸ್ಮೃತಿ ಮಂಧಾನ ಸ್ಪಷ್ಟನೆ

ಟೀಂ ಇಂಡಿಯಾ ಮಹಿಳಾ ತಂಡನ ಆಟಗಾರ್ತಿ ಸ್ಮೃತಿ ಮಂಧಾನ ಅವರ ಮದುವೆಯ ಬಗ್ಗೆ ಕೇಳಿ ಬಂದ ವದಂತಿ ಸುದ್ದಿಗಳ ಬಗ್ಗೆ ಕೊನೆಗೂ ತೆರೆ ಎಳೆದಿದ್ದಾರೆ..

ಸಂಗೀತ ಸಂಯೋಜಕ ಪಲಾಶ್​​ ಮುಚ್ಚಲ್​​​​​​ ಜೊತೆ ಸ್ಮೃತಿ ಮಂಧಾನ ಮದುವೆ ನಿಂತು ಹೋಗಿರುವುದಾಗಿ ಹೇಳಿದ್ದಾರೆ.. ಸ್ಮೃತಿ ತಮ್ಮ ಇನ್​ಸ್ಟಾ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡು ತಮ್ಮ ಮದುವೆ ಎಲ್ಲಾ ವದಂತಿಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.. ಪಾಲಾಶ್​ ಮುಚ್ಚಲ್​​​ ಜೊತೆಗಿನ ಮದುವೆಯನ್ನು ಕ್ಯಾನ್ಸಲ್​​​​ ಮಾಡಲಾಗಿದ್ದು, ಈ ವಿಷಯವನ್ನು ಇಲ್ಲಿಗೆ ನಿಲ್ಲಿಸಲು ನಾನು ಬಯಸುತ್ತೇನೆ ಎಂದು ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ..

ಕಳೆದ ಕೆಲ ದಿನಗಳಿಂದ ನನ್ನ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬಿವೆ. ಈ ಸಮಯದಲ್ಲಿ ನಾನು ಮಾತನಾಡುವುದು ತುಂಬಾ ಮುಖ್ಯ ಎಂದು ಭಾವಿಸುತ್ತೇನೆ.ನಾನು ತುಂಬಾ ಖಾಸಗಿ ವ್ಯಕ್ತಿ, ಅದನ್ನ ಹಾಗೆಯೇ ಇಡಲು ಬಯಸುತ್ತೇನೆ. ಆದರೆ ಮದುವೆಯನ್ನ ರದ್ದುಗೊಳಿಸಲಾಗಿದೆ ಎಂಬುದನ್ನ ಸ್ಪಷ್ಟಪಡಿಸಬೇಕಾಗಿದೆ.

ಈ ವಿಷಯವನ್ನು ಇಲ್ಲಿಗೆ ನಿಲ್ಲಿಸಲು ನಾನು ಬಯಸುತ್ತೇನೆ ಮತ್ತು ನಿಮ್ಮೆಲ್ಲರೂ ಅದೇ ರೀತಿ ಮಾಡಬೇಕೆಂದು ಒತ್ತಾಯಿಸುತ್ತೇನೆ. ದಯವಿಟ್ಟು ಈ ಸಮಯದಲ್ಲಿ ಎರಡೂ ಕುಟುಂಬಗಳ ಗೌಪ್ಯತೆಯನ್ನು ಗೌರವಿಸಿ ಮತ್ತು ನಮಗೆ ಮುಂದುವರಿಯಲು ಅವಕಾಶ ನೀಡಬೇಕೆಂದು ನಾನು ವಿನಂತಿಸುತ್ತೇನೆ.

ನಮ್ಮೆಲ್ಲರನ್ನೂ ಒಂದು ಉದ್ದೇಶ ಮುನ್ನಡೆಸುತ್ತದೆ ಎಂದು ಭಾವಿಸುತ್ತೇನೆ. ನನಗೆ, ಅದು ಯಾವಾಗಲೂ ನನ್ನ ದೇಶವನ್ನು ಪ್ರತಿನಿಧಿಸುವುದಾಗಿದೆ. ನಾನು ಭಾರತಕ್ಕಾಗಿ ದೀರ್ಘಕಾಲ ಆಡುವುದನ್ನು ಮತ್ತು ಟ್ರೋಫಿಗಳನ್ನು ಗೆಲ್ಲುವುದನ್ನು ಮುಂದುವರಿಸಲು ಆಶಿಸುತ್ತೇನೆ. ಅದುವೇ ನನ್ನ ಗಮನವಾಗಿರುತ್ತದೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು. ಮುಂದುವರಿಯುವ ಸಮಯ ಇದು ಎಂದು ಸ್ಮೃತಿ ಇನ್​ಸ್ಟಾಗ್ರಾಮ್ ಪೋಸ್ಟ್ ಹಂಚಿಕೊಂಡಿದ್ದಾರೆ.

ಸ್ಮೃತಿ ಮಂಧಾನ ಹಾಗೂ ಪಾಲಾಶ್ ಮುಚ್ಚಲ್ ಅವರ ಮದುವೆ ನವೆಂಬರ್ 23 ರಂದು ನಡೆಯಬೇಕಿತ್ತು. ಆದರೆ ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂಧಾನ ಅವರ ಹಠಾತ್ ಅನಾರೋಗ್ಯದಿಂದಾಗಿ ಸಮಾರಂಭವನ್ನು ಮುಂದೂಡಲಾಯಿತು. ಅವರ ತಂದೆ ಹೃದಯಾಘಾತದ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎನ್ನಲಾಗಿತ್ತು. ಆದರೆ ಇದೀಗ ಪಾಲಾಶ್ ಮುಚ್ಚಲ್ ಜೊತೆಗಿನ ವಿವಾಹವನ್ನು ರದ್ದುಗೊಳಿಸಿರುವುದಾಗಿ ಸ್ಮೃತಿ ಮಂಧಾನ ತಿಳಿಸಿದ್ದಾರೆ.

Comments (0)

Your email address will not be published. Required fields are marked *

Back to top button