ಫ್ರೀಡಂ ಟಿವಿ ಎಂಡಿ ಎಲ್.ಎಂ ನಾಗರಾಜು ಅವರಿಗೆ ಡಾ.ರಾಜ್ಕುಮಾರ್ ಪುರಸ್ಕಾರ

ಬೆಂಗಳೂರು: ಫ್ರೀಡಂ ಟಿವಿ ವ್ಯವಸ್ಥಾಪಕ ನಿರ್ದೇಶಕರಾದ ಎಲ್.ಎಂ ನಾಗರಾಜು ಅವರಿಗೆ ಡಾ.ರಾಜ್ಕುಮಾರ್ ಪುರಸ್ಕಾರ -2025 ನೀಡಿ ಗೌರವಿಸಲಾಯಿತು.
ವರನಟ ಡಾ.ರಾಜ್ ಅವರ ಒಡನಾಡಿ, ಡಾ.ರಾಜ್ ಕುಮಾರ್ ರಂಗಭೂಮಿ ಚಲನಚಿತ್ರ ಟ್ರಸ್ಟ್ ಸಂಸ್ಥಾಪಕ ಎಂ.ಆರ್ ರಾಜು ಮತ್ತು ಅವರ ತಂಡ ಫ್ರೀಡಂ ಟಿವಿ ಕಚೇರಿಗೆ ಆಗಮಿಸಿ, ಎಂಡಿ ನಾಗರಾಜು ಅವರಿಗೆ ಡಾ.ರಾಜ್ಕುಮಾರ್ ಪ್ರಶಸ್ತಿ ನೀಡಿ ಸನ್ಮಾನ ಮಾಡಿತು.
ಮಾಧ್ಯಮ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಎಲ್ ಎಂ ನಾಗರಾಜು ಅವರಿಗೆ ಡಾ.ರಾಜ್ಕುಮಾರ್ ಪುರಸ್ಕಾರ ಲಭಿಸಿದೆ. ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಹಾಗು ಟಿವಿ ವಾಹಿನಿಗಳಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದ ಹಿರಿಯ ಪತ್ರಕರ್ತ ಎಲ್.ಎಂ.ನಾಗರಾಜು, ತಮ್ಮದೇ ಕನಸಿನ Freedom Tv ಆರಂಭಿಸಿ ಮುನ್ನಡೆಸುತ್ತಿದ್ದಾರೆ.
ಸೆಪ್ಟೆಂಬರ್ 11 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಡಾ.ರಾಜ್ ಟ್ರಸ್ಟ್ ನ ಬೆಳ್ಳಿ ಹಬ್ಬದ ಕಾರ್ಯಕ್ರಮ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಡಾ.ರಾಜ್ ಕುಮಾರ್ ಪುರಸ್ಕಾರ-2025, ಯುವ ಸಾಧಕರಿಗೆ ಡಾ.ಪುನೀತ್ ರಾಜ್ ಕುಮಾರ್ ಪುರಸ್ಕಾರ-2025 ನೀಡಿ ಗೌರವಿಸಲಾಯಿತು.




