Tuesday, March 3, 2026
30.4 C
Bengaluru
Google search engine
LIVE
ಮನೆ#Exclusive NewsTop Newsಹುಚ್ಚು ನಾಯಿ ಕಡಿತದಿಂದ ಐದಾರು ಮಕ್ಕಳ ಸ್ಥಿತಿ ಗಂಭೀರ

ಹುಚ್ಚು ನಾಯಿ ಕಡಿತದಿಂದ ಐದಾರು ಮಕ್ಕಳ ಸ್ಥಿತಿ ಗಂಭೀರ

ಬೀದರ್​: ಹುಚ್ಚು ನಾಯಿ ಕಡಿತದಿಂದ ಐದಾರು ಮಕ್ಕಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಬೀದರ್​ ಜಿಲ್ಲೆ ಚಿಟಗುಪ್ಪಾ ತಾಲೂಕಿನ ಮನ್ನಾಎಖೇಳ್ಳಿ ಗ್ರಾಮದಲ್ಲಿ ನಡೆದಿದೆ.

ಮನೆಯ ಹೊರಗಡೆ ಆಟವಾಡವಾಡುತ್ತಿದ್ದ ಮಕ್ಕಳ ಮೇಲೆ ಮತ್ತು ಮನೆಯ ಒಳಗಡೆಯೂ ಆಡುತ್ತಿದ್ದ ಮಕ್ಕಳ ಮೇಲೆಯೂ ಹುಚ್ಚುನಾಯಿಯು ದಾಳಿ ಮಾಡಿದ್ದು, ಗಂಭೀರ ಗಾಯವಾಗಿದೆ. ಗ್ರಾಮದ ಚರಣರೆಡ್ಡಿ, ನಾಗೇಶರೆಡ್ಡಿ, ಸಂಯುಕ್ತ ಜಗನಾಥ, ಆಸೀಮ ಎಂಡಿ ವಸೀಮ,  ಪಲ್ಲವಿ ಸೇರಿ ಇನ್ನು ಒಂದೆರಡು ಮಕ್ಕಳಿಗೆ ಹುಚ್ಚು ನಾಯಿ ಮನಬಂದತೆ ಕಡಿದು ಗಾಯಗೊಳಿಸಿದೆ. ಗ್ರಾಮದಲ್ಲಿ ಮಾಂಸ ಮಾರಾಟ ಹೆಚ್ಚಿರುವ ಕಾರಣ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮದ ಪ್ರಮುಖ ಬೀದಿಯಲ್ಲಿ ಜನರು ಭಯದ ನಡುವೆ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ತೀವ್ರ ಗಾಯಗೊಂಡ ಮಕ್ಕಳಿಗೆ ಪೋಷಕರು ಮನ್ನಾಎಖೇಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪ್ರಥಮ ಚಿಕಿತ್ಸೆ ನೀಡಿ ಗಂಭೀರವಾಗಿ ಗಾಯಗೊಂಡ ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಆಸ್ಪತ್ರೆಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ ನೀಡಿ ಮಕ್ಕಳು ಆರೋಗ್ಯ ವಿಚಾರಿಸಿದ್ದು, ಉತ್ತಮ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments