Top Newsದೇಶ/ವಿದೇಶ

ತಾಂತ್ರಿಕ ಸಮಸ್ಯೆಯಿಂದ 40 ನಿಮಿಷಗಳ ಕಾಲ ಆಕಾಶದಲ್ಲೇ ಸುತ್ತಿದ ಇಂಡಿಗೋ ವಿಮಾನ

ಹೈದರಾಬಾದ್​​:  ಹೈದರಾಬಾದ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನವು ತಾಂತ್ರಿಕ ದೋಷದಿಂದಾಗಿ, ಸುಮಾರು 40 ನಿಮಿಷಗಳ ಕಾಲ ಗಾಳಿಯಲ್ಲಿ ಸುತ್ತುತ್ತಾ ತಿರುಪತಿಗೆ ಸುರಕ್ಷಿತವಾಗಿ ಮರಳಿದೆ.

ಇಂಡಿಗೊದ ಏರ್‌ಬಸ್ A321neo ವಿಮಾನವು ಭಾನುವಾರ ಸಂಜೆ 7:42ಕ್ಕೆ ತಿರುಪತಿಯಿಂದ ಹೊರಟಿತ್ತು. ಫ್ಲೈಟ್-ಟ್ರ್ಯಾಕಿಂಗ್ ವೆಬ್‌ಸೈಟ್ Flightradar24 ಪ್ರಕಾರ, ವಿಮಾನವು ಸುಮಾರು 40 ನಿಮಿಷಗಳ ಕಾಲ ಆಕಾಶದಲ್ಲಿ ಸುತ್ತುತ್ತಾ ವೆಂಕಟನಗಿರಿ ಬಳಿಕ ಯೂಟರ್ನ್​ ತೆಗೆದುಕೊಂಡು ಅಂತಿಮವಾಗಿ ವಿಮಾನವು ರಾತ್ರಿ 8:34 ಕ್ಕೆ ತಿರುಪತಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತ ತುರ್ತು ಲ್ಯಾಂಡಿಂಗ್ ಮಾಡಿತು.

ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಪ್ರಯಾಣಿಕರಲ್ಲಿ ತುಂಬಾ ಗಾಬರಿಯನ್ನು ಉಂಟು ಮಾಡಿತ್ತು. ಆದ್ರೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್​ ಆಗಿದ್ದು ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆ ಬಳಿಕ ತಿರುಪತಿಯಿಂದ ಹೈದರಾಬಾದ್​ಗೆ ಹೋಗುವ ಕೊನೆಯ ವಿಮಾನವನ್ನು ಸಹ ರದ್ದು ಮಾಡಲಾಗಿತ್ತು. ಇದರಿಂದ ಹಲವು ಪ್ರಯಾಣಿಕರು ಪರದಾಡುವಂತಾಯಿತು. ಇದರಿಂದ ಕೋಪಗೊಂಡ ವಿಮಾನ ಪ್ರಯಾಣಿಕರು ಇಂಡಿಯೋ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button