ಜಿಲ್ಲೆ

ಮಾದಕ ದ್ರವ್ಯ ಮಾರಾಟ ಆರೋಪ; ಕಲಬುರಗಿ ಕಾಂಗ್ರೆಸ್​ ಮುಖಂಡನ ಬಂಧನ

ಕಲಬುರಗಿ: ಮಾದಕದ್ರವ್ಯ ಸಾಗಾಣಿಕೆ ಆರೋಪದಲ್ಲಿ ಕಾಂಗ್ರೆಸ್​ ಮುಖಂಡ, ಕಲಬುರಗಿ ದಕ್ಷಿಣ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಲಿಂಗರಾಜ್​ ಕಣ್ಣಿಯನ್ನು ಮುಂಬೈನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಆಪ್ತ ಎಂದು ಗುರುತಿಸಿಕೊಂಡಿದ್ದ ಲಿಂಗರಾಜ್. ಮಹಾರಾಷ್ಟ್ರದಲ್ಲಿ ಮಾದಕ ದ್ರವ್ಯ ಮಾರಾಟ ಮಾಡುವ ವೇಳೆ ಮುಂಬೈನ ಬಜಾರ್ ಪೇಠ ಪೊಲೀಸರು ಲಿಂಗರಾಜ್​​ ಕಣ್ಣಿಯನ್ನು ಬಂಧಿಸಿದ್ಧಾರೆ. ಬಂಧನದ ವೇಳೆ 120 ಕ್ಕೂ ಹೆಚ್ಚು ಕೊಡೆನೈನ್ ಸಿರಪ್ ಬಾಟಲ್ ಇತ್ತು ಎನ್ನಲಾಗಿದೆ. ಎನ್​ಡಿಪಿಎಸ್ ಕಾಯ್ದೆ ಅಡಿ ಮುಂಬೈನ ಬಜಾರ್ ಪೇಠ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments (0)

Your email address will not be published. Required fields are marked *

Back to top button