ಕ್ರೈಂ ಸ್ಟೋರಿ

ಬೆಳಗಾವಿ : ಮಾಜಿ ಸಚಿವನ ಪುತ್ರ ಅರೆಸ್ಟ್​..!

ಕೊಲೆ ಹಾಗೂ ವರದಕ್ಷಿಣೆ ಕೇಸ್​ನಲ್ಲಿ ಮಾಜಿ ಸಚಿವನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.ಎಸ್​.ಎಂ.ಕೃಷ್ಣ ಅವಧಿಯಲ್ಲಿ ಸಚಿವರಾಗಿದ್ದ ವೀರಕುಮಾರ್ ಪಾಟೀಲ್ ಅವರ ಪುತ್ರನನ್ನು ಅರೆಸ್ಟ್​ ಮಾಡಲಾಗಿದೆ.

ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ವೈಷ್ಣವಿ ಕೊಲೆ ಪ್ರಕರಣ ಭಾರೀ ಸಂಚಲನ ಮೂಡಿಸಿತ್ತು. ಇದೀಗ ಈ ಪ್ರಕರಣ ಸಂಬಂಧ ಸಚಿವ ಸತೀಶ್ ಜಾರಕಿಹೊಳಿ ಆಪ್ತ ಮಾಜಿ ಸಚಿವ ವೀರಕುಮಾ‌ರ್ ಪಾಟೀಲ್ ಪುತ್ರ ಪ್ರೀತಮ್ ನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

ವೈಷ್ಣವಿ ಹಗವಣೆ ವರದಕ್ಷಿಣೆ ಕಿರುಕುಳ, ಕೊಲೆ ಪ್ರಕರಣದ ಆರೋಪಿಗಳಾಗಿದ್ದ ವೈಷ್ಣವಿ ಮಾವ ರಾಜೇಂದ್ರ, ಮೈದುನ ಸುಶೀಲ್​ಗೆ ಆಶ್ರಯ ಹಾಗೂ ಆರ್ಥಿಕ ಸಹಾಯ ಮಡಿದ ಆರೋಪದಲ್ಲಿ ಪ್ರೀತಮ್ ಪಾಟೀಲ್ ಬಂಧನವಾಗಿದೆ.

Comments (0)

Your email address will not be published. Required fields are marked *

Back to top button