ಮೂರು ದಿನಗಳಿಂದ ಬೆಂಗಳೂರಿನ ಯಲಹಂಕದ ವಿವೇಕಾನಂದ ಆಟದ ಮೈದಾನದಲ್ಲಿ ನಡೆದ ಫ್ರೀಡಂ ಟಿವಿ ವೀರವನಿತೆ ಅವಾರ್ಡ್ಸ್ ಮತ್ತು ಎಕ್ಸ್ ಪೋ ಸಂಪನ್ನಗೊಂಡಿದೆ.
ಅಂತಿಮ ದಿನವಾದ ಭಾನುವಾರ ಮಹಿಳಾ ಸಾಧಕಿಯರಿಗೆ ಫ್ರೀಡಂಟಿವಿ ವೀರವನಿತೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದೀಪ ಬೆಳಗುವ ಮೂಲಕ ಎಸ್ ಆರ್ ವಿಶ್ವನಾಥ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜನಪ್ರಿಯ ಶಾಸಕ ಎಸ್ ಆರ್ ವಿಶ್ವನಾಥ್ ಅವರ ನೇತೃತ್ವದಲ್ಲಿ ಫ್ರೀಡಂಟಿವಿ ಸಂಸ್ಥಾಪಕರಾದ ಎಲ್ ಎಂ ನಾಗರಾಜು ಅವರ ಉಪಸ್ಥಿತಿಯಲ್ಲಿ ವೀರವನಿತೆಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಹಿರಿಯ ಐಪಿಎಸ್ ಅಧಿಕಾರಿ ಡಿ ರೂಪಾ ಅವರಿಗೆ, ಎಂಎಲ್ಎ ಟ್ರಸ್ಟ್ ನ ಶಾರದಾವಿದ್ಯಾನಿಕೇತನ ಶಾಲೆಯ ಮುಖ್ಯಶಿಕ್ಷಕಿ ಶಾಂತಲಾ ಅವರಿಗೆ, ಪಿಎಂಎಸ್ ಶಾಲೆಯ ಪ್ರಾಂಶುಪಾಲೆ ಉಮಾಬಾಯಿ ಅವರಿಗೆ, ಆಟೋ ಚಾಲಕಿ ಡಿವಿ ವೀಣಾ ಅವರಿಗೆ, ಹಿರಿಯ ನಟಿ ವಾಣಿಶ್ರೀ ಅವರಿಗೆ, ಬಿಬಿಎಂಪಿ ಹೈಸ್ಕೂಲ್ ಶಿಕ್ಷಕಿ ಹೇಮಾವತಿ ಅವರಿಗೆ, ಮಾರ್ಷಲ್ ಆರ್ಟ್ಸ್ ಪ್ರವೀಣೆ ಅಶ್ವಿನಿ ಕೃಷ್ಣ ಅವರಿಗೆ, ಕರಾಟೆ ಪಟು ಲಕ್ಷ್ಮಿ ಅವರಿಗೆ, ಸಮಾಜಸೇವಕಿ ಸುಮಾ ಮುರಳೀಧರನ್ ಅವರಿಗೆ, ಸಮಾಜಸೇವಕಿ ಸಾವಿತ್ರಿ ಅವರಿಗೆ, ತಿರುಮಲಾ ವಿದ್ಯಾನಿಕೇತನ್ ಪ್ರಾಂಶುಪಾಲೆ ಕವಿತಾ ಅವರಿಗೆ ವೀರವನಿತೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಫ್ರಿಡಂ ಟಿವಿಯ ಕುರಿತಾಗಿ ಮೆಚ್ಚುಗೆಯ ಮಾತುಗಳನ್ನು ಆಡಿದರು. ಅಂತಿಮವಾಗಿ ಫ್ರೀಡಂ ಟಿವಿ ಎಕ್ಸ್ಪೋದಲ್ಲೇ ಸ್ಟಾಲ್ ಹಾಕಿದ್ದ ಸ್ವಾವಲಂಬಿ ವನಿತೆ, ವಿಶೇಷಚೇತನರಾದ ಸವಿತಾ ಅವರಿಗೆ ವೀರವನಿತೆ ಪ್ರಶಸ್ತಿ ನೀಡಿ ಗೌರವಿಸಲಾಯಿತು..
ಎರಡೂ ಕಾಲು ಇಲ್ಲದಿದ್ದರೂ ಯಾರ ನೆರವು ಇಲ್ಲದಿದ್ದರೂ ಸ್ವಯಂ ಬದುಕು ಕಟ್ಟಿಕೊಂಡಿರುವ ಸವಿತಾ ಅವರ ಬಳಿಗೆ ಹೋಗಿ ಫ್ರೀಡಂಟಿವಿಯಿಂದ ವೀರವನಿತೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.. ಈ ಮೂಲಕ ನಿಮ್ಮ ಫ್ರಿಡಂಟಿವಿ ಇತಿಹಾಸ ಸೃಷ್ಟಿಸಿತು.
ಜೇಡಿ ಮಣ್ಣಿನಲ್ಲೇ ಆಭರಣಗಳನ್ನ ತಯಾರಿಸುವ ಸವಿತಾ ಅವರು ವೈಕಲ್ಯತೆಯನ್ನೂ ಮೆಟ್ಟಿನಿಂತಿದ್ದಾರೆ.
ಇದೇ ವೇಳೆ, ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು, ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯ್ತು.. ಆಗಾಗ ಸುರಿಯುತ್ತಿದ್ದ ಸೋನೆ ಮಳೆ ಮತ್ತು ಯಲಹಂಕದ ಮಹಾ ಜನತೆ ಇದಕ್ಕೆ ಸಾಕ್ಷಿಯಾದರು.
ಫ್ರೀಡಂಟಿವಿ ವೀರವನಿತೆ ಅವಾರ್ಡ್ಸ್ ಮತ್ತು ಎಕ್ಸ್ ಪೋದಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಯಶಸ್ಸಿಗೆ ಕಾರಣೀಭೂತರಾದರು.. ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿ ಖುಷಿ ಪಟ್ಟರು. 16 ಬ್ರಾಂಡ್ ಸ್ಟಾಲ್ ಮತ್ತು ನೂರು ಇತರೆ ಸ್ಟಾಲ್ ಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೀತು.
ಕಾರ್ಯಕ್ರಮ ಯಶಸ್ವಿಯಾಗಲು ಕಾರಣರಾದ ವೆಂಡರ್ಸ್ ಮತ್ತು ಯಲಹಂಕ ಜನತೆಗೆ, ಕಾರ್ಯಕ್ರಮದ ಯಶಸ್ಸಿಗೆ ಹಗಲು ರಾತ್ರಿ ದುಡಿದ ಸಿಬ್ಬಂದಿಗೆ ಸಂಸ್ಥೆಯ ಎಂಡಿ ಎಲ್ಎಂ ನಾಗರಾಜು ಧನ್ಯವಾದ ಹೇಳಿದರು
ಜನಸಾಮಾನ್ಯರ ಶಕ್ತಿಯಾದ ಫ್ರೀಡಂಟಿವಿ ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದಲ್ಲೂ ಎಕ್ಸ್ ಪೋಗಳನ್ನು ಆಯೋಜಿಸುವ ಮೂಲಕ ಫ್ರೀಡಂಟಿವಿ ಆಶಯವನ್ನು ಜನರ ನಡುವೆ ಕೊಂಡೊಯ್ಯುವ ಕೆಲಸ ಮಾಡಲಿದೆ.. ಫ್ರೀಡಂಟಿವಿ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ.