ಜನಸಾಮಾನ್ಯರ ದನಿಫ್ರೀಡಂ ಟಿವಿ ವಿಶೇಷಮನರಂಜನೆ

ಫ್ರೀಡಂ ಟಿವಿ ಎಕ್ಸ್ ಪೋಗೆ ನಟ ಚೇತನ್ ಚಾಲನೆ – ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್

ನಿಮ್ಮ ನೆಚ್ಚಿನ ಫ್ರೀಡಂ ಟಿವಿಯು ಬೆಂಗಳೂರಿನಲ್ಲಿ ವೀರ ವನಿತೆ ಅವಾರ್ಡ್ಸ್ 2025 ಆಯೋಜಿಸಿದೆ. ಯಲಹಂಕ ನ್ಯೂಟೌನ್​​ನಲ್ಲಿರುವ ವಿವೇಕಾನಂದ ಪ್ಲೇ ಗ್ರೌಂಡ್​​ನಲ್ಲಿ ಇಂದಿನಿಂದ 3 ದಿನಗಳ ಕಾಲ ಈ ಮೆಗಾ ಎಕ್ಸ್​​ಪೋ ನಡೀತಿದೆ.

ಫ್ರೀಡಂ ಟಿವಿ ಎಕ್ಸ್​​ ಪೋವನ್ನು ‘ಆ ದಿನಗಳು’ ಖ್ಯಾತಿಯ ನಟ ಚೇತನ್,  ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಫ್ರೀಡಂಟಿವಿ ನಿರ್ಭೀತ ಪತ್ರಿಕೋದ್ಯಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು

ಹಲವು ಕಾರ್ಯಕ್ರಮಗಳನ್ನು ಎಕ್ಸ್​ ಪೋದಲ್ಲಿ ಆಯೋಜಿಸಲಾಗಿದ್ದು, ನೂರಾರು ಮಕ್ಕಳು ಭಾಗಿಯಾಗಿ ಖುಷಿ ಪಟ್ರು. ಮಕ್ಕಳ ನೃತ್ಯ ಎಲ್ಲರ ಕಣ್ಮನ ಸೆಳೆಯಿತು. ಬೇಸಿಗೆ ರಜೆಯಲ್ಲಿ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಮಕ್ಕಳು, ಎಕ್ಸ್​​ ಪೋನಲ್ಲಿ ಭಾಗಿಯಾಗಿ ಸಖತ್ ಮಜಾ ಮಾಡಿದರು.

ಕನ್ನಡ, ಹಿಂದಿ, ಇಂಗ್ಲೀಷ್ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.  ವೇದಿಕೆ ಮೇಲೆ ಮಕ್ಕಳು ಕುಣಿದು ಕುಪ್ಪಳಿಸುವುದನ್ನು ನೋಡುತ್ತಾ, ಎಕ್ಸ್​​ ಪೋನಲ್ಲಿ ಭಾಗಿಯಾಗಿದ್ದವರೆಲ್ಲಾ ಸಖತ್ ಎಂಜಾಯ್ ಮಾಡಿದರು.

ಇನ್ನು, ನೃತ್ಯ, ಹಾಡು, ಫ್ಯಾಷನ್​ ಶೋ, ಚಿತ್ರಕಲೆ ಸೇರಿ ಹಲವು ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಆಕರ್ಷಕ ಬಹುಮಾನ ವಿತರಿಸಲಾಯ್ತು. ಮೊದಲ ಬಹುಮಾನ, ಎರಡನೇ ಬಹುಮಾನ, ಮೂರನೇ ಬಹುಮಾನಗಳನ್ನು ನೀಡಿದ್ದು, ವಿಜೇತ ಮಕ್ಕಳಿಗೆ ಮೆಡಲ್ ಜೊತೆಗೆ ಸರ್ಟಿಫಿಕೇಟ್ ವಿತರಿಸಲಾಯ್ತು. ನಟ ಚೇತನ್ ಬಹುಮಾನ ವಿತರಿಸಿದ್ದು ವಿಶೇಷ.

ಯಲಹಂಕ ಕ್ಷೇತ್ರದ ಜನಪ್ರಿಯ ಶಾಸಕ ಎಸ್ ಆರ್ ವಿಶ್ವನಾಥ್ ಅವರ ನೇತೃತ್ವದಲ್ಲಿ ನಿಮ್ಮ ಫ್ರೀಡಂ ಟಿವಿ ಆಯೋಜಿಸಿರೋ ಫೆಸ್ಟಿವಲ್​​​ನಲ್ಲಿ ಫುಡ್, ಫನ್, ಫ್ಯಾಶನ್ ಜೊತೆಗೆ ಆಟೋಮೊಬೈಲ್ ಎಕ್ಸ್​ ​ಪೋ ಕೂಡ ಇದೆ. ಇಲ್ಲಿ ಬಗೆ ಬಗೆಯ ತಿಂಡಿ ತಿನಿಸುಗಳು, ನಿಮ್ಮ ಮನೆಗೆ ಬೇಕಾದ ಗೃಹೋಪಯೋಗಿ ವಸ್ತುಗಳು, ಹೆಣ್ಮಕ್ಕಳಿಗೆ ಪ್ರಿಯವಾದ ಜ್ಯೂವೆಲ್ಲರಿ ಐಟಮ್ಸ್ ಕೂಡ ಇವೆ. ಜೊತೆಗೆ ನಿಮ್ಮಿಷ್ಟದ ವಾಹನಗಳ ವೀಕ್ಷಣೆ, ಖರೀದಿ ಕೂಡ ಮಾಡಬಹುದು.

ನಾಳೆ ನಮ್ಮೊಂದಿಗೆ ನಟಿ-ನಿರೂಪಕಿ ಜಾಹ್ನವಿ, ಕಲಾವಿದ ಮಿಮಿಕ್ರಿ ಗೋಪಿ ಇರಲಿದ್ದಾರೆ. ಇನ್ನು ಅಂತಿಮ ದಿನವಾದ ಭಾನುವಾರ ನಮ್ಮಂದಿಗೆ ಸನ್ಮಾನ್ಯ ಸಚಿವರಾದ ಬೈರತಿ ಸುರೇಶ್​, ಶಾಸಕ ಎಸ್​ ಆರ್ ವಿಶ್ವನಾಥ್​, ಐಪಿಎಸ್ ಅಧಿಕಾರಿ ಡಿ ರೂಪಾ ಸೇರಿ ಗಣ್ಯರು ಇರಲಿದ್ದಾರೆ.

ಅದೇ ದಿನ ಸಂಜೆ ವಿವಿಧ ವಲಯದಲ್ಲಿ ಸಾಧನೆ ಮಾಡಿದ ಸಾಧಕಿಯರಿಗೆ ಫ್ರೀಡಂ ಟಿವಿ ವೀರ ವನಿತೆ ಅವಾರ್ಡ್ಸ್ ಪ್ರದಾನ ಮಾಡಲಾಗುತ್ತೆ..

ನೀವು ನಮ್ಮೊಂದಿಗೆ ಜೊತೆಯಾಗಿ.. ಈ ಎಕ್ಸ್​​ಪೋಗೆ ಎಲ್ಲರಿಗೂ ಉಚಿತ ಎಂಟ್ರಿ ಇದೆ… ಮೂರು ದಿನಗಳ ಕಾಲ ವಿವಿಧ ಕಾಂಪಿಟೇಷನ್​​ಗಳು ಕೂಡ ಇರಲಿದ್ದು ಸಾಕಷ್ಟು ಜನ ಈಗಾಗಲೇ ನೋಂದಣಿ ಮಾಡಿಸಿದ್ದಾರೆ. ವಿಜೇತರಿಗೆ ಬಹುಮಾನ ಹಾಗೂ ಪ್ರಶಂಸನಾ ಪತ್ರವನ್ನ ಕೂಡ ನೀಡಲಾಗುತ್ತೆ.

ಯಲಹಂಕ ಸುತ್ತಮುತ್ತಲ ಜನ ಫ್ರೀಡಂ ಟಿವಿ ಆಯೋಜಿಸಿರೋ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ.

Comments (0)

Your email address will not be published. Required fields are marked *

Back to top button