ದೇಶ/ವಿದೇಶ

ಪಾಕ್​​ನಿಂದ ಭಾರತದ ಸೇನಾ ವೆಬ್​​ಸೈಟ್ ಹ್ಯಾಕ್..!

ಪಾಕಿಸ್ತಾನ ಹಾಗೂ ಭಾರತ ನಡುವೆ ಯುದ್ಧದ ಕಾರ್ಮೋಡ ಶುರುವಾಗಿರುವ ಹೊತ್ತಲ್ಲೇ, ಪಾಕಿಸ್ತಾನ ಈಗ ಸೈಬರ್ ಯುದ್ಧಕ್ಕೆ ಮುಂದಾಗಿದೆ. ಭಾರತೀಯ ಸೇನೆಯ ವೆಬ್ ಸೈಟ್ ಅನ್ನೇ ಪಾಕ್ ಸೈಬರ್ ಚೋರರು ಅಟ್ಯಾಕ್ ಮಾಡಿದ್ದಾರೆ.

ಪಾಕಿಸ್ತಾನದ ಸೈಬರ್ ಫೋರ್ಸ್ ಈಗ ಭಾರತದ ವಿವಿಧ ಭದ್ರತಾ ಸಂಸ್ಥೆಗಳು ಹಾಗು ಸೇನೆಯ ವೆಬ್​​ಸೈಟ್​​ಗಳನ್ನ ಹ್ಯಾಕ್ ಮಾಡಿದೆ ಅನ್ನೋ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಪಾಕ್ ಸೈಬರ್ ಚೋರರು ಭಾರತೀಯ ಸೇನೆಯ ವಾಹನ ಉತ್ಪಾದನಾ ನಿಗಮದ ವೆಬ್​​ಸೈಟ್​​ಗಳನ್ನ ಕೂಡ ಹ್ಯಾಕ್ ಮಾಡಲು ಪ್ರಯತ್ನಿಸಿದ್ದಾರೆ. ಇದೇ ವೆಬ್​ಸೈಟ್​​ನಲ್ಲಿ ಸೇನಾಪಡೆಯ ಯುದ್ಧ ಟ್ಯಾಂಕರ್​​ಗಳ ಮಾಹಿತಿ ಕೂಡ ಒಳಗೊಂಡಿದೆ.

ಪಾಕಿಸ್ತಾನ ಹಂತ ಹಂತವಾಗಿ ಭಾರತವನ್ನ ಕೆಣಕಿ ಯುದ್ಧಕ್ಕೆ ಪ್ರಚೋದನೆ ಕೊಡುತ್ತಿದೆ. ಇದು ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಭಾರತ ಹಾಗೂ ಪಾಕ್ ನಡುವೆ ಭಯಾನಕ ಯುದ್ಧ ಶುರುವಾಗಿಬಿಡುವ ಎಲ್ಲ ಆತಂಕಗಳೂ ಇದೆ.

Comments (0)

Your email address will not be published. Required fields are marked *

Back to top button