ಜಿಲ್ಲೆ

ಫ್ಲೆಕ್ಸ್, ಬ್ಯಾನರ್ ಹಾವಳಿಗೆ ಬಿಬಿಎಂಪಿ ಬ್ರೇಕ್ ಹಾಕಲು ಪ್ಲಾನ್​..!

ಬೆಂಗಳೂರು : ಅನಧಿಕೃತ ಜಾಹೀರಾತು ವಿರುದ್ದ ಸಮರ ಸಾರಲು ಬಿಬಿಎಂಪಿ ಮುಂದಾಗಿದೆ. ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ಆಳವಡಿಕೆಗೆ ಅವಕಾಶ ಇಲ್ಲ, ಹೈಕೋರ್ಟ್ ಸಹ ಜಾಹೀರಾತು ನಿಷೇಧಿಸಿ ಆದೇಶಿಸಿದೆ.

ನಗರದ ವಿವಿಧೆಡೆ  ಫ್ಲೆಕ್ಸ್ ಬ್ಯಾನರ್ ಹಾವಳಿ ಹೆಚ್ಚಾಗಿದೆ. ಇತ್ತೀಚಿಗೆ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಫ್ಲೆಕ್ಸ್ ಬ್ಯಾನರ್ ಆಳವಡಿಸಿ ಬಾರಿ ಸುದ್ದು ಮಾಡಿತ್ತು. ಈ ಬಗ್ಗೆ ಬಿಬಿಎಂಪಿ ವಿರುದ್ದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬಿಬಿಎಂಪಿ ಕಮಿಷನರ್ ಸಭೆ ಮಾಡಿ ಫ್ಲೆಕ್ಸ್ , ಬ್ಯಾನರ್ ಆಳವಡಿಸುವರ ವಿರುದ್ದ ಎಫ್ಐಆರ್ ದಾಖಲಿಸುವಂತೆ ಕಮಿಷನರ್ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವಾರ್ಡ್ ಗಳಲ್ಲಿ ಆಳವಡಿಸಿರುವ ಬ್ಯಾನರ್ ಫ್ಲೆಕ್ಸ್ ತೆರವುಗೊಳಿಸಿ, ಅಳವಡಿಸಿದವರ ಮೇಲೆ ಕ್ರಮ ಕೈಗೊಳ್ಳಿ ಅಂತ ಸೂಚನೆ ನೀಡಿದ್ದಾರೆ.

Comments (0)

Your email address will not be published. Required fields are marked *

Back to top button